HEALTH TIPS

ಹವಾಮಾನ ಬದಲಾವಣೆ | ಮಾಲಿನ್ಯ ನಿಯಂತ್ರಣಕ್ಕೆ ತ್ವರಿತ ಕ್ರಮವಾಗಲಿ: ಸೈಮನ್‌ ಸ್ಟಿಯಲ್

        ಬಾಕು: 'ಹವಾಮಾನ ಬದಲಾವಣೆ ತಡೆಗೆ ಕೈಗೊಂಡಿರುವ ನಿರ್ಧಾರಗಳು 'ಜಿ-20 ರಾಷ್ಟ್ರಗಳ ಆರ್ಥಿಕತೆ ಸ್ವಯಂರಕ್ಷಣೆ' ಕ್ರಮಗಳೇ ಆಗಿವೆ' ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಸೈಮನ್‌ ಸ್ಟಿಯಲ್‌ ಪ್ರತಿಪಾದಿಸಿದರು.

           'ಹವಾಮಾನ ಆಧರಿತ ಆರ್ಥಿಕ ಹಾನಿ ತಡೆಯಲು ಮಾಲಿನ್ಯಕ್ಕೆ ‌ತ್ವರಿತ ನಿಯಂತ್ರಣ ಹೇರಬೇಕು' ಎಂದು ಈ ವೇಳೆ ಜಿ-20 ರಾಷ್ಟ್ರಗಳ ಮುಖ್ಯಸ್ಥರಿಗೆ ಅವರು ಆಗ್ರಹಿಸಿದ್ದಾರೆ.

          ತಾಪಮಾನ ಬದಲಾವಣೆ ಕುರಿತಂತೆ ಅಜೈರ್‌ಬೈಜಾನ್‌ನ ರಾಜಧಾನಿ ಬಾಕುವಿನಲ್ಲಿ ನಡೆದ 'ಸಿಒಪಿ29' ಶೃಂಗಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.


           'ಹವಾಮಾನ ಬದಲಾವಣೆ ತಡೆಗೆ ಜಿ-20 ರಾಷ್ಟ್ರಗಳೂ ಪರಿಹಾರ ಕಂಡುಕೊಳ್ಳಬೇಕು. ಒಂದು ರಾಷ್ಟ್ರ, ಕೆಲವೇ ರಾಷ್ಟ್ರಗಳಿಂದ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ. ಹೀಗಾಗಿ, ಮುಂದಿನ ವಾರ ರಿಯೊದಲ್ಲಿ ನಡೆಯುವ ಶೃಂಗಸಭೆಯಲ್ಲಿ ಜಾಗತಿಕ ತಾಪಮಾನ ಬದಲಾವಣೆ ವಿಷಯವೇ ಮೊದಲ ಆದ್ಯತೆಯಾಗಿರಬೇಕು' ಎಂದು ಒತ್ತಿ ಹೇಳಿದರು.

              ನವೆಂಬರ್ 18-19ರಂದು ಜಿ-20 ಸಮಾವೇಶವು ಬ್ರೆಜಿಲ್‌ನ ರಿಯೊ ಡ- ಜನೈರೊದಲ್ಲಿ ನಡೆಯಲಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೇರಿ ಹಲವು ಪ್ರಮುಖರು ಭಾಗವಹಿಸುವರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries