ಕಾಸರಗೋಡು: ನೀಲೇಶ್ವರ ವೀರರ್ ಕಾವ್ ಕಳಿಯಾಟ ಮಹೋತ್ಸವ ಸಂದರ್ಭ ಉಂಟಾದ ಪಟಾಕಿ ದುರಂತದಲ್ಲಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿರುವವರನ್ನು ಪ್ರಾಚ್ಯವಸ್ತು ಮತ್ತು ನೋಂದಣಿ ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಭೇಟಿಯಾಗಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಗಾಯಗೊಂಡವರ ಕುಟುಂಬಗಳಿಗೆ ಸಚಿವರು ಸಾಂತ್ವನ ಹೇಳಿದರು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆ, ಪರಿಯಾರಂ ವೈದ್ಯಕೀಯ ಕಾಲೇಜು ಮತ್ತು ಮಿಮ್ಸ್ ಆಸ್ಪತ್ರೆಯಂತಹ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿ ಮಾಡಿದರು.
ದುರಂತದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳಲು ಸಂಪುಟ ಸಭೆ ತೀರ್ಮಾನಿಸಿರುವುದಾಗಿ ಸಚಿವರು ತಿಳಿಸಿದರು.
ಪೂರ್ವ ನಿಯೋಜಿತ ಕಾರ್ಯಕ್ರಮಗಳನು ಕೈಬಿಟ್ಟು ದುರಂತ ಸಥಳಕ್ಕೆ ಭೇಟಿ ನೀಡಿದ ನಂತರ ಸಚಿವರು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು ಕೈಪ್ರತ್ ಕೃಷ್ಣನ್ ನಂಬಿಯಾರ್, ಕೆಪಿ ಜಯರಾಜನ್, ಪ್ರಮೋದ್ ಕರುವಾಲಂ ಕೂಲೇರಿ ರಾಘವನ್, ಜನಾರ್ದನನ್, ಪುರುಷೋತ್ತಮನ್, ವಾರ್ಡ್ ಕೌನ್ಸಿಲರ್ ಇ.ಶಜೀರ್ ಮೊದಲಾದವರು ಸಚಿವರ ಜತೆಗಿದ್ದರು.