ಬದಿಯಡ್ಕ: ಕೊಲ್ಲಂಗಾನ ಶ್ರೀ ರಕ್ತೇಶ್ವರಿ ನಾಗ ಗುಳಿಗ ಕ್ಷೇತ್ರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಬಿಡುಗಡೆಗೊಳಿಸಿ ಆಶೀರ್ವಸಿದರು.
ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷ ನಾರಾಯಣ ಭಟ್ ಪಾಡಿ ಕಲ್ಲಕಟ್ಟ, ಅಧ್ಯಕ್ಷ ಪ್ರೊ.ಎ. ಶ್ರೀನಾಥ್ ಕೊಲ್ಲಂಗಾನ, ಸಂಚಾಲಕ ಸುಬ್ಬಣ್ಣ ನಾಯ್ಕ್ ಅರ್ತಲ, ಗೌರವ ಸಲಹೆಗಾರರಾದ ಮಹೇಶ್ ವಳಕುಂಜ, ಕಾರ್ಯಧ್ಯಕ್ಷ ಪ್ರಮೋದ್ ಕುಮಾರ್ ಕೊಲ್ಲಂಗಾನ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಅರ್ತಲ, ಕೋಶಾಧಿಕಾರಿ ಐತ್ತಪ್ಪ ನಾಯ್ಕ ಮದರ್ಂಬೈಲು, ಕಾರ್ಯದರ್ಶಿಗಳಾದ ರಾಧಾಕೃಷ್ಣ ಅರ್ತಲ, ಅಶೋಕ್ ನಾಯ್ಕ್ ಅರ್ತಲ, ಸಹಕೋಶಾಧಿಕಾರಿ ಆದರ್ಶ ಅರ್ತಲ, ಮಹಿಳಾ ಸಮಿತಿ ಅಧ್ಯಕ್ಷೆ ರಾಜೇಶ್ವರಿ ನಾರಾಯಣ ನಾಯ್ಕ ಅರ್ತಲ ಉಪಸ್ಥಿತರಿದ್ದರು.