ಪೆರ್ಲ: ಮಕ್ಕಳಿಗೆ ಎಳವೆಯಲ್ಲಿ ಕಲಿಸುವ ಸಂಸ್ಕಾರ ಹಾಗೂ ನೀಡುವ ಪೋಷಕ ಆಹಾರಗಳು ಭವಿಷ್ಯದ ಬದುಕಿಗೆ ಭದ್ರ ಬುನಾದಿ ಆಗಬೇಕು ಎಂದು ಬೆದ್ರಂಪಳ್ಳ ಎಎಲ್ ಪಿ ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಕುಮಾರ್ ಮಾಸ್ತರ್ ಅಭಿಪ್ರಾಯಪಟ್ಟರು.
ಅವರು ಬೆದ್ರಂಪಳ್ಳ ಅಂಗನವಾಡಿಯಲ್ಲಿ ನಡೆದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷೆ ಪ್ರೇಮಾ ಎಂ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪಂ.ಸದಸ್ಯ ಚನಿಯಪ್ಪ ಪೂಜಾರಿ ಅಲಾರ್, ಎಣ್ಮಕಜೆ ಆರೋಗ್ಯ ಕೇಂದ್ರದ ಜ್ಯೂ.ಹೆಲ್ತ್ ಇನ್ಸ್ ಫೆಕ್ಟರ್ ಮನೋಜ್, ಭಾಗ್ಯ ಟೀಚರ್, ಕುಸುಮ ನಡುಬೈಲ್, ಭಾಗೀರಥಿ ಬೆದ್ರಂಪಳ್ಳ, ಎಸ್.ಎಂ.ಕಲಾ ಕ್ರೀಡಾ ಕ್ಲಬ್ಬಿನ ಅಧ್ಯಕ್ಷ ಚಂದ್ರ ನಾಯ್ಕ್, ರಾಜೇಶ್ ನಾಯ್ಕ್ ಮಲ್ಪತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೇರಳ ಅಬಕಾರಿ ಇಲಾಖೆಯ ಸಿವಿಲ್ ಎಕ್ಸೈಸ್ ಆಫೀಸರ್ ಮೋಹನ ಪೂಜಾರಿ ಬೆದ್ರಂಪಳ್ಳ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಕ್ಕಳ ಸಾಂಸ್ಕøತಿಕ ಮನೋರಂಜನ ಕಾರ್ಯಕ್ರಮಗಳು ಜರಗಿದವು. ಅಂಗನವಾಡಿ ಅಧ್ಯಾಪಕಿ ಚೇತನಾ ಸ್ವಾಗತಿಸಿ, ನವೀತಾ ಬಲ್ತಕಲ್ಲು ವಂದಿಸಿದರು. ಅಂಗನವಾಡಿ ಸಹಾಯಕಿ ವೇದಾವತಿ ಮಕ್ಕಳ ಪೋಷಕರು ಕಾರ್ಯಕ್ರಮಕ್ಕೆ ನೇತೃತ್ವವಹಿಸಿದ್ದರು.