ಕೊಚ್ಚಿ: ಪರವೂರಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಎಲ್ಲದಕ್ಕೂ ಕೇಸು ಹಾಕಿದರೆ ಕೇಸು ಹಾಕಲಷ್ಟೇ ಸಮಯ ಸಿಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದರೆ ಪ್ರಕರಣ ದಾಖಲಿಸಲು ಮಾತ್ರ ಸಮಯಾವಕಾಶ ಸಿಗುತ್ತದೆ ಎಂದು ಉಲ್ಲೇಖಿಸಿ ನ್ಯಾಯಾಲಯ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ
ಕಪ್ಪು ಬಾವುಟದ ಪ್ರತಿಭಟನೆ ಮಾನಹಾನಿಕರವಲ್ಲ ಅಥವಾ ಅವಮಾನಕರವಲ್ಲ ಎಂದು ಹೇಳಿದ ನ್ಯಾಯಾಲಯ, ಯಾವುದೇ ಬಣ್ಣದ ಬಾವುಟ ಬಳಸಿ ಪ್ರತಿಭಟನೆ ಮಾಡುವುದು ಕಾನೂನಿಗೆ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಪೋಲೀಸ್ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪವನ್ನೂ ರದ್ದುಗೊಳಿಸಿದೆ..
ಪ್ರತಿಭಟನೆ ವೇಳೆ ಸಣ್ಣಪುಟ್ಟ ಬಲಪ್ರಯೋಗ ಸಹಜ, ಸಣ್ಣಪುಟ್ಟ ವಿಷಯಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವುದನ್ನು ತಪ್ಪಿಸಬೇಕು ಎಂದು ಏಕ ಪೀಠದ ಆದೇಶದಲ್ಲಿ ತಿಳಿಸಲಾಗಿದೆ.
ಕಪ್ಪು ಬಾವುಟದ ಪ್ರತಿಭಟನೆ ಮಾನಹಾನಿ ಅಥವಾ ಅವಮಾನಕರವಲ್ಲ ಎಂದು ಹೇಳಿದ ಕೋರ್ಟ್, ಯಾವುದೇ ಬಣ್ಣದ ಬಾವುಟ ಬಳಸಿ ಪ್ರತಿಭಟನೆ ಕಾನೂನಿಗೆ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ್ದು, ಹೈಕೋರ್ಟ್ ಏಕ ಪೀಠ ಪೆÇಲೀಸ್ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪವನ್ನೂ ರದ್ದುಗೊಳಿಸಿದೆ.
ಏಪ್ರಿಲ್ 9, 2017 ರಂದು ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ವಿರುದ್ಧ ಪರವೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.