ಕಾಸರಗೋಡು: ಪಡಿತರ ವಿತರಕರ ಜಂಟಿ ಸಮನ್ವಯ ಸಮಿತಿಯ ಆಶ್ರಯದಲ್ಲಿ ಕಾಸರಗೋಡು ತಾಲೂಕು ಸರಬರಾಜು ಕಛೇರಿ ಎದುರು ಸಾಮೂಹಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
6 ವರ್ಷಗಳ ಹಿಂದೆ ಜಾರಿಗೆ ತಂದ ವೇತನ ಪ್ಯಾಕೇಜ್ ಪರಿಷ್ಕರಿಸಬೇಕು, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಮಿಷನ್ ಮೊತ್ತ ವಿತರಿಸಬೇಖು,
ಓಣಂ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ 1000 ರೂ.ಉತ್ಸವ ಭತ್ಯೆ ನೀಡಬೇಕು, ಪ್ರತಿ ತಿಂಗಳು ಪಡಿತರ ಸಾಮಗ್ರಿಗಳನ್ನು ಅಂಗಡಿಗಳಿಗೆ ಸಕಾಲದಲ್ಲಿ ತಲುಪಿಸಬೇಕು, ಕೆಟಿಪಿಡಿಎಸ್ ಕಾಯ್ದೆಯನ್ನು ಪರಿಷ್ಕರಿಸಬೇಕು ಎಂಬ ಬೇಡಿಕೆಗಳನ್ನು ಮುಂದಿರಿಸಿ ಪಡಿತರ ವಿತರಕರ ಸಂಘ ಧರಣಿ ಆಯೋಜಿಸಿತ್ತು. ಸಮನ್ವಯ ಸಮಿತಿಯ ಆಶ್ರಯದಲ್ಲಿ ಕಾಸರಗೋಡು ತಾಲೂಕು ಸಪ್ಲೈ ಕಛೇರಿ ಎದುರು ಆಯೋಜಿಸಲಾದ ಸಾಮೂಹಿಕ ಧರಣಿಯನ್ನು ಎಕೆಆರ್‍ಆರ್‍ಡಿಎ ಜಿಲ್ಲಾಧ್ಯಕ್ಷ ಶಂಕರ ಬೆಳ್ಳಿಗೆ ಉದ್ಘಾಟಿಸಿದರು. ಎ ಕೆ ಆರ್ ಆರ್ ಡಿ ಎ ತಾಲೂಕುಅಧ್ಯಕ್ಷ ಸತೀಶನ ಇಡವೇಲಿ ಅಧ್ಯಕ್ಷತೆ ವಹಿಸಿದ್ದರು. ಸಂಯುಕ್ತ ಸಮರ ಸಮಿತಿ ಜಿಲ್ಲಾಧ್ಯಕ್ಷ ಬಾಲಕೃಷ್ಣ ಬಲ್ಲಾಳ್, ಟಿ.ವಿಜಯನ್ ನಾಯರ್, ಕೆ.ಪ್ರದೀಪ್ ಕುಮಾರ್, ಸುಧಾಮ ಗೋಸಾಡ ವಸಂತ ಶೆಣೈ, ನಾರಾಯಣನ್ ಕೋಳಿಯಡುಕ್ಕಂ, ಇ.ಕೆ.ಅಬ್ದುಲ್ಲಾ, ಶೋಭನಾ ವಿಜಯನ್ ಉಪಸ್ಥಿತರಿದ್ದರು.ತಾಲೂಕು ಕಾರ್ಯದರ್ಶಿ ಪಿ.ಅಬ್ದುಲ್ ಗಫೂರ್ ಸ್ವಾಗತಿಸಿದರು. ಪಿ.ಲೋಹಿತಾಕ್ಷನ್ ವಂದಿಸಿದರು.