ವಯನಾಡು: ಮುಂಡಕೈ-ಚುರಲ್ಮಲಾದ ಭೂಕುಸಿತದಿಂದ ಸಂತ್ರಸ್ತರಾದವರಿಗೆ ಆಹಾರ ಕಿಟ್ ವಿತರಣೆಯನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಮೆಪ್ಪಾಡಿ ಪಂಚಾಯತ್‍ಗೆ ಸೂಚಿಸಿದ್ದಾರೆ. ಈ ಹಿಂದೆ ಹುಳುಗಳು ತುಂಬಿರುವ ಅಕ್ಕಿ ಹಂಚಿರುವುದು ಕಂಡು ಬಂದಿದೆ.
ದಾಸ್ತಾನು ಇರುವ ಆಹಾರ ಪದಾರ್ಥಗಳನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಮೆಪ್ಪಾಡಿ ಪಂಚಾಯಿತಿ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಗುಣಮಟ್ಟ ಪರಿಶೀಲಿಸಿದ ನಂತರವೇ ವಿತರಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಉಳಿದ ಕಿಟ್‍ಗಳನ್ನು ಆಹಾರ ಸುರಕ್ಷತಾ ಇಲಾಖೆಯಿಂದ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ.
ದುರಂತ ಸಂತ್ರಸ್ತರಿಗೆ ನೀಡಲಾಗಿದ್ದ ಆಹಾರದ ಕಿಟ್‍ನಲಿದ್ದ್ಲ ಸೋಯಾಬೀನ್ ಸೇವಿಸಿ ಮೂವರು ಮಕ್ಕಳು ವಿಷಾಹಾರಕ್ಕೊಳಗಾಗಿದ್ದಾರೆ ಎಂಬ ದೂರು ಬಂದಿತ್ತು. ಭೇದಿ ಮತ್ತು ವಾಂತಿಯಿಂದ ಬಳಲುತ್ತಿದ್ದ ಮಕ್ಕಳನ್ನು ವೈತಿರಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು.