ಕಾಸರಗೋಡು : ನಗರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ , ಸಮಾಜಸೇವಕ ಕೊಪ್ಪಳ್ ಅಬ್ದುಲ್ಲ ಅವರ 8ನೇ ಸಂಸ್ಮರಣಾ ಸಮಾರಂಭ ಕಾಸರಗೋಡು ಪಿಲಿಕುಂಜೆಯಲ್ಲಿರುವ ಜಿಲ್ಲಾ ಗ್ರಂಥಾಲಯ ಸಭಾಂಗಣದಲ್ಲಿ ಜರುಗಿತು. ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಸಮಾರಂಭ ಉದ್ಘಾಟಿಸಿದರು.
ಶಾಸಕ ಸಿ.ಎಚ್ ಕುಞಂಬು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕೊಪ್ಪಳ ಅಬ್ದುಲ್ಲ ಅವರು ರಾಜಕಾರಣಕ್ಕೆ ಮಿಗಿಲಾಗಿ ಸಮಾಜಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟ ಧೀಮಂತರಗಿದ್ದರು ಎಂದು ತಿಳಿಸಿದರು ಎ. ಎಸ್.ಮಹಮ್ಮದ್‍ಕುಞÂ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಶಾಫಿತೆರುವತ್ ಸಮಸ್ಮರಣಾ ಭಾಷಣ ಮಾಡಿದರು. ಟಿ.ಎ.ಶಾಫಿ, ಬಿ.ಎಂ.ಅಶ್ರಫ್, ಎ.ಕೆ.ಮೊಯ್ದೀನ್‍ಕುಞÂ ಹಾಜಿ, ಪಿ.ಎ.ಅಶ್ರಫಲಿ, ಕಟ್ಟಿಯಾನಂ ಮುಹಮ್ಮದ್‍ಕುಞÂ, ಅಶ್ರಫಲಿ ಚೇರಂಗೈ, ವಕೀಲ ಬಿ.ಎಫ್.ಅಬ್ದುಲ್ ರಹಮಾನ್, ಟಿ. ಎಂ ಮುಹಮ್ಮದ್ ಅಸ್ಲಾಂ, ಎನ್ ಎ ಇಕ್ಬಾಲ್ ಮತ್ತು ಜಮಾಲ್ ಪೈಕ ಉಪಸ್ಥಿತರಿದ್ದರು. ಸಿ.ಎಲ್.ಹಮೀದ್ ಸ್ವಾಗತಿಸಿದರು. ಸಿದ್ದೀಕ್ ಚೇರಂಕೈ ವಂದಿಸಿದರು.