HEALTH TIPS

ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್‌ಗೆ ರಾಹುಲ್ ಗಾಂಧಿ ಬರೆದ ಪತ್ರದಲ್ಲೇನಿದೆ?

 ವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ವಿರುದ್ಧ ಸೋಲು ಕಂಡಿರುವ ಕಮಲಾ ಹ್ಯಾರಿಸ್‌ ಅವರಿಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಚುನಾಯಿತರಾಗಿರುವ ಟ್ರಂಪ್‌ ಅವರನ್ನು ಅಭಿನಂದಿಸಿ, ಶುಭ ಕೋರಿರುವ ರಾಹುಲ್‌, ಪರಾಜಿತ ಅಭ್ಯರ್ಥಿ ಕಮಲಾ ಅವರಿಗೆ ಉತ್ಸಾಹದಿಂದ ಚುನಾವಣೆ ಎದುರಿಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ.

ನವೆಂಬರ್‌ 7ರಂದು (ಗುರುವಾರ) ಬರೆದಿರುವ ಎರಡೂ ಪತ್ರಗಳನ್ನು ಕಾಂಗ್ರೆಸ್‌ ಪಕ್ಷವು ಎಕ್ಸ್‌/ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಟ್ರಂಪ್‌ ಅವರಿಗೆ, 'ಅಮೆರಿಕದ 47ನೇ ಅಧ್ಯಕ್ಷರಾಗಿ ಚುನಾಯಿತರಾಗಿರುವ ನಿಮಗೆ ಅಭಿನಂದನೆಗಳು. ಭವಿಷ್ಯದ ಬಗೆಗಿನ ನಿಮ್ಮ ದೂರದೃಷ್ಟಿಯ ಮೇಲೆ ಜನರು ಭರವಸೆ ಇರಿಸಿದ್ದಾರೆ' ಎಂದು ಹೇಳಿದ್ದಾರೆ.

ಮುಂದುವರಿದು, 'ಪ್ರಜಾಪ್ರಭುತ್ವದ ಮೌಲ್ಯಗಳೊಂದಿಗಿನ ಬದ್ಧತೆಯಲ್ಲಿ ಬೇರೂರಿರುವ 'ಐತಿಹಾಸಿಕ ಸ್ನೇಹ'ವನ್ನು ಭಾರತ ಮತ್ತು ಅಮೆರಿಕ ಹಂಚಿಕೊಂಡಿವೆ. ನಿಮ್ಮ ನಾಯಕತ್ವದಲ್ಲಿ, ಎರಡೂ ರಾಷ್ಟ್ರಗಳ ಹಿತಾಸಕ್ತಿಯ ವಲಯಗಳಲ್ಲಿ ನಮ್ಮ ಸಹಕಾರವು ಮತ್ತಷ್ಟು ಆಳವಾಗಿ ನೆಲೆಗೊಳ್ಳಲಿದೆ ಎಂಬ ವಿಶ್ವಾಸವಿದೆ. ಭಾರತೀಯರು ಮತ್ತು ಅಮೆರಿಕನ್ನರಿಗಾಗಿ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾವು ಕೆಲಸ ಮುಂದುವರಿಸುವ ಭರವಸೆಯಿದೆ' ಎಂದಿದ್ದಾರೆ.

'ಅಮೆರಿಕದ ಅಧ್ಯಕ್ಷರಾಗಿ ನಿಮ್ಮ ಎರಡನೇ ಅವಧಿಗೆ ಶುಭ ಹಾರೈಸುತ್ತೇನೆ' ಎಂದು ಬರೆದಿದ್ದಾರೆ.

ರಿಪಬ್ಲಿಕನ್‌ ಪಕ್ಷದ ಟ್ರಂಪ್‌ 2016ರಲ್ಲಿ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಗಾದಿಗೇರಿದ್ದರು. ಆದರೆ, 2020ರಲ್ಲಿ ಜೋ ಬೈಡನ್‌ ಎದುರು ಸೋಲು ಕಂಡಿದ್ದರು.

ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಅವರಿಗೆ, 'ಉತ್ಸಾಹದಿಂದ ಅಧ್ಯಕ್ಷೀಯ ಚುನಾವಣೆ ಎದುರಿಸಿದ್ದಕ್ಕಾಗಿ ಅಭಿನಂದನೆಗಳು. ಭರವಸೆಗಳನ್ನು ಒಗ್ಗೂಡಿಸುವ ನಿಮ್ಮ ಸಂದೇಶವು ಹಲವರನ್ನು ಪ್ರೇರೇಪಿಸಲಿದೆ' ಎಂದು ತಿಳಿಸಿದ್ದಾರೆ.

ಹಾಗೆಯೇ, 'ಬೈಡನ್‌ ಆಡಳಿತದಲ್ಲಿ, ಭಾರತ ಮತ್ತು ಅಮೆರಿಕವು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಆಳವಾದ ಸಹಕಾರ ಸಾಧಿಸಿವೆ. ರಾಜತಾಂತ್ರಿಕ ಮೌಲ್ಯಗಳಿಗೆ ಹೊಂದಿರುವ ಬದ್ಧತೆಯು ನಮ್ಮ ಸ್ನೇಹವನ್ನು ಮುನ್ನಡೆಸಲಿದೆ. ಉಪಾಧ್ಯಕ್ಷರಾಗಿ, ಜನರನ್ನು ಒಗ್ಗೂಡಿಸುವ ಹಾಗೂ ಸಾಮಾನ್ಯ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ನೀವು ಮಾಡಿದ ದೃಢ ನಿಶ್ಚಯವು ಸದಾ ಸ್ಮರಣೀಯ' ಎಂದಿದ್ದಾರೆ.

'ಭವಿಷ್ಯದ ನಿಮ್ಮ ಪ್ರಯತ್ನಗಳಿಗೆ ಶುಭವಾಗಲಿ' ಎಂದು ಹಾರೈಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries