HEALTH TIPS

ಅಮೆರಿಕಗೆ ಬೆದರಿಕೆವೊಡ್ಡುವ ಕ್ಷಿಪಣಿ ಪ್ರಯೋಗ: ಉ. ಕೊರಿಯಾದ ನಡೆಗೆ ಖಂಡನೆ

         ಸೋಲ್ : ಉತ್ತರ ಕೊರಿಯಾ ಗುರುವಾರ ದೂರ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಿದೆ. ಇದು ಅಮೆರಿಕ ಭೂ ಭಾಗಕ್ಕೆ ಕ್ರಮಿಸುವಷ್ಟು ಸಾಮರ್ಥ್ಯ ಹೊಂದಿದ್ದು, ದೇಶದ ಭದ್ರತೆಗೆ ಬೆದರಿಕೆವೊಡ್ಡುವಂತಿದೆ ಎಂದು ವಿಶ್ಲೇಷಿಸಲಾಗಿದೆ.

          ಪರೀಕ್ಷಾರ್ಥ ಉಡ್ಡಯನಕ್ಕೆ ಆದೇಶಿಸಿದ್ದ ಉತ್ತರ ಕೊರಿಯಾದ ನಾಯಕ ಕಿಮ್‌ ಜೊಂಗ್ ಉನ್, ಭದ್ರತೆಗೆ ಆತಂಕ ತಂದ ಶತ್ರುಗಳಿಗೆ ಉತ್ತರ ಕೊರಿಯಾದ ಪ್ರತಿಕ್ರಿಯೆ ಇದಾಗಿದೆ.

'ಇದೊಂದು ಸೂಕ್ತವಾದ ಮಿಲಿಟರಿ ಕ್ರಮವಾಗಿದೆ' ಎಂದು ಹೇಳಿದ್ದಾರೆ.

           ಉತ್ತರ ಕೊರಿಯಾ ತನ್ನ ಪರಮಾಣು ಪಡೆಗಳನ್ನು ಬಲಪಡಿಸುವ ತನ್ನ ನೀತಿಯನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಪುನರುಚ್ಛರಿಸಿದ್ದಾರೆ.

         ಅಮೆರಿಕ-ದಕ್ಷಿಣ ಕೊರಿಯಾದ ಮಿಲಿಟರಿ ತರಬೇತಿಗೆ ಪ್ರತಿಕ್ರಿಯೆ ನೀಡಲು ತನ್ನ ಪರಮಾಣು ಸಾಮರ್ಥ್ಯವನ್ನು ಹೆಚ್ಚಿಸುವುದೊಂದೇ ಇರುವ ಆಯ್ಕೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ. ಆದರೆ, ಉತ್ತರ ಕೊರಿಯಾ ಮೇಲೆ ದಾಳಿ ಮಾಡುವ ಯಾವುದೇ ಉದ್ದೇಶ ಇಲ್ಲ ಎಂದು ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಹೇಳಿವೆ.

           ಚುನಾವಣೆ ಹೊಸ್ತಿಲಲ್ಲಿರುವ ಅಮೆರಿಕದ ಗಮನ ಸೆಳೆಯಲು ಈ ಪ್ರಯೋಗ ನಡೆಸಲಾಗಿದೆ ಎಂದು ಹೇಳಲಾಗಿದೆ. ಅಲ್ಲದೇ, ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ನೆರವಾಗಲು ಉತ್ತರ ಕೊರಿಯಾ ಸೇನಾಪಡೆಗಳನ್ನು ಕಳುಹಿಸಿದೆ. ಇದಕ್ಕೆ ವ್ಯಕ್ತವಾಗಿರುವ ವಿರೋಧಕ್ಕೆ ಪ್ರತಿಕ್ರಿಯೆಯಾಗಿ ಉತ್ತರ ಕೊರಿಯಾ ಈ ಪ್ರಯೋಗ ನಡೆಸಿದೆ ಎಂದೂ ಹೇಳಲಾಗುತ್ತಿದೆ. ಈ ಪ್ರಯೋಗ ನಡೆಸಲು ಉತ್ತರ ಕೊರಿಯಾಗೆ ರಷ್ಯಾ ತಂತ್ರಜ್ಞಾನದ ನೆರವು ಒದಗಿಸಿರುವ ಬಗ್ಗೆ ಶಂಕೆ ಇದೆ.

ತಜ್ಞರ ಪ್ರಕಾರ ಅಮೆರಿಕ-ದಕ್ಷಿಣ ಕೊರಿಯಾದ ಮಿಲಿಟರಿ ಅಭ್ಯಾಸವನ್ನು ನೆಪವಾಗಿಟ್ಟುಕೊಂಡು ಉತ್ತರ ಕೊರಿಯಾ ತನ್ನ ಪರಮಾಣು ಶಸ್ತ್ರಾಗಾರವನ್ನು ವಿಸ್ತರಿಸುತ್ತಿದೆ. ನೆರೆ ರಾಷ್ಟ್ರಗಳನ್ನು ದೂರವಿಡಲು ಉತ್ತರ ಕೊರಿಯಾವು ಘನ ಇಂಧನವಿರುವ ದೀರ್ಘ ಶ್ರೇಣಿಯ ಕ್ಷಿಪಣಿಯ ಪ್ರಯೋಗ ನಡೆಸಿರಬಹುದು ಎಂದು ದಕ್ಷಿಣ ಕೊರಿಯಾದ ಸೇನಾಧಿಕಾರಿಗಳು ತಿಳಿಸಿದ್ದಾರೆ.

        ಉತ್ತರ ಕೊರಿಯಾವು ಇತ್ತೀಚಿನ ವರ್ಷಗಳಲ್ಲಿ ಕ್ಷಿಪಣಿ ತಂತ್ರಜ್ಞಾನದಲ್ಲಿ ದಾಪುಗಾಲು ಇಡುತ್ತಿದೆ. ಆದರೆ, ಅಮೆರಿಕ ಮೇಲೆ ದಾಳಿ ಮಾಡುವಷ್ಟು ಸಾಮರ್ಥ್ಯದ ಪರಮಾಣು ಶಸ್ತ್ರಾಸ್ತ್ರದ ಕ್ಷಿಪಣಿಯನ್ನು ದಕ್ಷಿಣ ಕೊರಿಯಾ ಹೊಂದಿರುವ ಸಾಧ್ಯತೆಯಿಲ್ಲ ಎಂಬುದು ವಿದೇಶಿ ತಜ್ಞರ ಅಭಿಪ್ರಾಯ. ರಷ್ಯಾಗೆ ಸೇನಾಪಡೆಗಳನ್ನು ಕಳುಹಿಸಿದ್ದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ ಪರಮಾಣು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ರಷ್ಯಾದಿಂದ ನೆರವು ಪಡೆಯಬಹುದು ಎಂಬ ಅಭಿಪ್ರಾಯವೂ ಇದೆ.

ಭದ್ರತಾ ಮಂಡಳಿ ನಿರ್ಣಯದ ಸ್ಪಷ್ಟ ಉಲ್ಲಂಘನೆ

           ಭದ್ರತೆಯನ್ನು ಅಸ್ಥಿರಗೊಳಿಸುವ ಹಾಗೂ ಅನಗತ್ಯವಾಗಿ ಆತಂಕ ಹಾಗೂ ಅಪಾಯವ ಹೆಚ್ಚಿಸುವ ಈ ನಡೆಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಭದ್ರತಾ ಮಂಡಳಿಯ ವಕ್ತಾರ ಸೀನ್ ಸಾವೆಟ್ ತಿಳಿಸಿದ್ದಾರೆ. ಅಮೆರಿಕದ ನೆಲ ಮತ್ತು ದಕ್ಷಿಣ ಕೊರಿಯಾ ಹಾಗೂ ಜಪಾನಿನ ಸುರಕ್ಷತೆಗೆ ಅಮೆರಿಕ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ ಎಂದು ಸಾವೆಟ್ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಶಾಂತಿಗೆ ಭಂಗ ತರುವ ಉತ್ತರ ಕೊರಿಯಾದ ಈ ಪರೀಕ್ಷಾರ್ಥ ಪ್ರಯೋಗವನ್ನು ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಖಂಡಿಸಿವೆ. ಉತ್ತರ ಕೊರಿಯಾದ ಈ ಪ್ರಯೋಗದ ಹಿನ್ನೆಲೆಯಲ್ಲಿ ಅಮೆರಿಕದೊಂದಿಗೆ ನಿಕಟವಾಗಿ ಸಮನ್ವಯತೆ ಸಾಧಿಸಲಾಗುತ್ತಿದೆ ಎಂದು ಈ ರಾಷ್ಟ್ರಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries