HEALTH TIPS

ಇಂದಿರಾ ಪುಣ್ಯ ಸ್ಮರಣೆ: ಕಾಂಗ್ರೆಸ್‌ ನಮನ

         ವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯ ಸ್ಮರಣೆ ದಿನವಾದ ಗುರುವಾರ ಕಾಂಗ್ರೆಸ್‌ ನಾಯಕರು ಇಂದಿರಾ ಅವರ ಕೊಡುಗೆಗಳನ್ನು ಸ್ಮರಿಸುವ ಮೂಲಕ ನಮನ ಸಲ್ಲಿಸಿದರು.

           ದೇಶದ ಪ್ರಥಮ ಮಹಿಳಾ ಪ್ರಧಾನಿಯಾದ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರೇ 1984ರ ಅಕ್ಟೋಬರ್‌ 31ರಂದು ಹತ್ಯೆ ಮಾಡಿದ್ದರು.

           ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಇಂದಿರಾ ಅವರ ಸಮಾಧಿಯಿರುವ 'ಶಕ್ತಿ ಸ್ಥಳ'ಕ್ಕೆ ಹೋಗಿ ಪುಷ್ಪ ಅರ್ಪಿಸಿ ನಮಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ದಿವಂಗತ ಮಾಜಿ ಪ್ರಧಾನಿಗೆ ಗೌರವ ಅರ್ಪಿಸಿದರು.

          ಇಂದಿರಾ ಅವರ ಮೊಮ್ಮಗ ರಾಹುಲ್‌ ಅವರು 'ಎಕ್ಸ್‌'ನಲ್ಲಿ, 'ಅಜ್ಜಿ, ದೇಶದ ಏಕತೆ ಮತ್ತು ಸಮಗ್ರತೆಗೆ ನಿಮ್ಮ ತ್ಯಾಗವು ಸಾರ್ವಜನಿಕ ಸೇವೆಯ ಹಾದಿಯಲ್ಲಿ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ' ಎಂದು ಸ್ಮರಿಸಿದ್ದಾರೆ. ಇದೇ ವೇಳೆ ಅವರು ಇಂದಿರಾ ಅವರ ಕೊಡುಗೆಗಳ ಕುರಿತ ವಿಡಿಯೊ ಹಂಚಿಕೊಂಡಿದ್ದಾರೆ.

             'ದೇಶದ ಏಕತೆ, ಸಮಗ್ರತೆಗೆ ಇಂದಿರಾ ಅವರ ಕೊಡುಗೆ ಅಪಾರ. ಅವರ ನಾಯಕತ್ವದಲ್ಲಿ ದೇಶ ಬಲಿಷ್ಠಗೊಂಡು, ಪ್ರಗತಿಪಥದತ್ತ ಸಾಗಿದೆ' ಎಂದು ಮಲ್ಲಿಕಾರ್ಜುನ ಖರ್ಗೆ ಸ್ಮರಿಸಿದ್ದಾರೆ.

ಇಂದಿರಾ ಅವರ ಮೊಮ್ಮಗಳು, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, 'ದೇಶಕ್ಕಾಗಿ ನೀವು ಬದ್ಧತೆ ತೋರಿ, ತ್ಯಾಗ ಮಾಡಿದ್ದೀರಿ. ನಿಮ್ಮಿಂದ ಕಲಿತ ಪಾಠಗಳು ಮತ್ತು ಮೌಲ್ಯಗಳು ನಮಗೆ ಸದಾ ಮಾರ್ಗದರ್ಶಿ. ದೇಶಕ್ಕಾಗಿ ಹುತಾತ್ಮರಾದ ನಿಮಗೆ ನಮನಗಳು' ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries