ಬದಿಯಡ್ಕ: ಗೃಹಿಣಿಯೊಬ್ಬರು ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬೇಳ ಕುಮಾರಮಂಗಲ ದೇವಸ್ಥಾನ ಸಮೀಪ ನಿವಾಸಿ ವಾಸುದೇವ ಆಸ್ರರ ಪತ್ನಿ ಸವಿತಾ (43) ಸಾವನ್ನಪ್ಪಿದ ದುರ್ದೈವಿ. ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಸಂಜೆ ಪತ್ತೆಯಾದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದರೂ ಜೀವರಕ್ಷಿಸಲು ಸಾಧ್ಯವಾಗಿಲ್ಲ.
ಪತಿ ತುರ್ತು ಕಾರ್ಯದ ನಿಮಿತ್ತ ಬೇರೆಡೆಗೆ ತೆರಳಿದ್ದರು. ಈ ವೇಳೆ ಸವಿತಾ ಮಾತ್ರ ಮನೆಯಲ್ಲಿದ್ದರು. ಸಂಜೆ 4.30ರ ವೇಳೆ ಶಾಲೆ ಬಿಟ್ಟು ಮಕ್ಕಳು ಮನೆಗೆ ತಲುಪಿದಾಗ ಬಾಗಿಲು ಮುಚ್ಚಿಕೊಂಡಿತ್ತು. ಒಳಗಿನಿಂದ ಚಿಲಕ ಹಾಕಿದ್ದು, ತಾಯಿಯನ್ನು ಕರೆದರೂ ಪ್ರತಿಕ್ರಿಯೆ ಉಂಟಾಗಿಲ್ಲವೆನ್ನಲಾಗಿದೆ. ವಿಷಯ ತಿಳಿದು ನೆರೆಮನೆಯವರು ತಲುಪಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಸವಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.