HEALTH TIPS

ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ-ದೇವಾಲಯಗಳು ಪುಣ್ಯಸಂಪಾದನೆಯ ಕೇಂದ್ರಗಳು - ವಸಂತ ಪೈ ಬದಿಯಡ್ಕ

ಬದಿಯಡ್ಕ: ಪುಣ್ಯವೆಂಬ ಇಂಧÀನವನ್ನು ತುಂಬಿಸಿಕೊಳ್ಳಬೇಕಾದರೆ ದೇವರ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ದೇವಾಲಯಗಳು ಪಾಪ ನಿವಾರಣೆ, ಸತ್ಕರ್ಮದ ಜಾಗೃತಿ, ಕರ್ತವ್ಯ ನಿರತೆಯನ್ನು ಎಚ್ಚರಿಸುವ ಕೇಂದ್ರಗಳಾಗಿವೆ. ಅಂತಹ ದೇವಸ್ಥಾನಗಳು ಸದಾ ಬೆಳಗಿದಾಗ ನಮ್ಮ ಬದುಕೂ ಬೆಳಕಾಗಬಲ್ಲುದು. ಪ್ರತಿದಿನ ದೇವಾಲಯದ ಬ್ರಹ್ಮ ಕಲಶೋತ್ಸವವನ್ನು ಕಣ್ಣಮುಂದೆ ಕಾಣುತ್ತಾ ನಮ್ಮ ನಮ್ಮ ಕರ್ತವ್ಯ ಪಾಲಿಸೋಣ ಎಂದು ಉದ್ಯಮಿ ಬಿ. ವಸಂತ ಪೈ ಬದಿಯಡ್ಕ ಅಭಿಪ್ರಾಯಪಟ್ಟರು.

ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕÀದ ಆಮಂತ್ರಣ ಪತ್ರಿಕೆಯನ್ನು ಸೋಮವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇವಸ್ಥಾನವನ್ನು ಸುಂದರಗೊಳಿಸಿ ಬ್ರಹ್ಮ ಕಲಶೋತ್ಸವದ ಆಚರಣೆಯಲ್ಲಿ ಭಾಗಿಯಾಗುವುದು ಒಂದು ಜೀವನದ ಬಹುದೊಡ್ಡ ಅವಕಾಶ. ಊರಿನ ಕ್ಷೇಮವು ಅಭೂತಪೂರ್ವವಾಗಿ ವೃದ್ಧಿಯಾಗುವುದಕ್ಕೆ, ಮಹತ್ತರ ಬದಲಾವಣೆಗಳಾಗುವುದಕ್ಕೆ ಅನೇಕ ನಿದರ್ಶನಗಳಿವೆ. ಸುಂದರತೆ, ಸುವ್ಯವಸ್ಥೆ, ಸಮೃದ್ಧಿಯ ತಾಣವಾಗುವಲ್ಲಿ ಭಕ್ತರ ಕೊಡುಗೆ ಮುಖ್ಯ ಎಂದು ಎಡನಾಡು ಕ್ಷೀರೋತ್ಪಾದನಾ ಸಂಘದ ಅಧ್ಯಕ್ಷ , ಸಾಮಾಜಿಕ ಮುಂದಾಳು ಕಾರಿಂಜ ಹಳೆಮನೆ ಶಿವರಾಮ ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ತಿಳಿಸಿದರು.

ದೇವಸ್ಥಾನದ ಸಭಾ ಭÀವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ  ವೈ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಏತಡ್ಕ ಡಾ,ಸುಬ್ರಾಯ ಭಟ್, ಉಪ ಗೌರವಾಧ್ಯಕ್ಷ ವೈ.ಶಂಕರ ಭಟ್ ವಿಟ್ಲ, ಕುಂಬ್ಳೆ ಫಿರ್ಕಾ ಬಂಟರ ಸಂಘದ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ, ಜೊತೆ ಕಾರ್ಯದರ್ಶಿ ಬಾಲಕೃಷ್ಣ ಕೆ.ಕೆ. ಕುಂಡಾಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಶಿಪ್ರಭಾ ವರುಂಬುಡಿ, ಸುಧಾ ಮಾಣಿತ್ತೋಡಿ, ಡಾ.ಅನ್ನಪೂರ್ಣೇಶ್ವರಿ ಏತಡ್ಕ ಇವರು ಶಿವಾರ್ಪಣಂ ಎನ್ನುವ ಬ್ರಹ್ಮ ಕಲಶೋತ್ಸವದ ಆಶಯ ಗೀತೆಯನ್ನು ಹಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಖಜಾಂಜಿ ವೈ.ವಿ.ಸುಬ್ರಹ್ಮಣ್ಯ ಸ್ವಾಗತಿಸಿ,. ಪಶುವೈದ್ಯ ಡಾ.ವೈ.ವಿ.ಕೃಷ್ಣಮೂರ್ತಿ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಚಂದ್ರಶೇಖರ ಏತಡ್ಕ ನಿರೂಪಿಸಿದರು.  ಕೇರಳ ಮರಾಠಿ ಸಂರಕ್ಷಣಾ ಸಮಿತಿಯ ಕುಂಬ್ಡಾಜೆ ಪ್ರಾದೇಶಿಕ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಸಂಘ ಏತಡ್ಕ, ಪೆರ್ಲ ವಲಯದ ಧರ್ಮಸ್ಥಳ ಸ್ವಸಹಾಯ ಸಂಘಗಳು, ಶ್ರೀ ಮಾತಾ ಹವ್ಯಕ ಭಜನಾ ಸಂಘ, ಬದಿಯಡ್ಕ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಶಿವಾರ್ಪಣಂ ಶ್ರಮದಾನ ಸೇವೆ ನಡೆಯಿತು. ಊರಪರವೂರ ಭಗವದ್ಭಕ್ತರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries