ಕುಡಿಯುವಾಗ ಏನೂ ಅನಿಸುವುದಿಲ್ಲ, ಆದರೆ ಮಾರನೇಯ ದಿನ ತಲೆನೋವು ಸಹಿಸಲು ಸಾಧ್ಯವಾಗುತ್ತಿಲ್ಲ, ಹ್ಯಾಂಗೋವರ್ ಕಡಿಮೆಯಾದರೆ ಸಾಕು ಎಂಬುವುದು ಮದ್ಯಪಾನ ಮಾಡಿದ ಬಹುತೇಕರ ಸಮಸ್ಯೆಯಾಗಿರುತ್ತದೆ. ಕೆಲವರಿಗೆ ತುಂಬಾ ಕುಡಿದಾಗ ಹ್ಯಾಂಗೋವರ್ ಆದರೆ ಇನ್ನು ಕೆಲವರಿಗೆ ಒಂದು ಪೆಗ್ ಕುಡಿದರರೂ ತಲೆನೋವಾಗುತ್ತೆ.
ತಲೆನೋವು ಅಂದರೆ ಅಸಾಧ್ಯ ನೋವು ಉಂಟಾಗುವುದು, ವಾಂತಿ ಬರುವುದು , ತಲೆಸುತ್ತುವುದು ಈ ಬಗೆಯ ಸಮಸ್ಯೆ ಉಂಟಾಗುವುದು. ಈ ರೀತಿ ಹ್ಯಾಂಗೋವರ್ ತಲೆನೋವು ಕಡಿಮೆ ಮಾಡಲು ಸಹಾಯವಾಗುವುದು ನೋಡಿ:
ಮೊದಲಿಗೆ ಹ್ಯಾಂಗೋವರ್ ಉಂಟಾಗಲು ಕಾರಣವೇನು ಎಂದು ನೋಡೋಣ:
ಖಾಲಿ ಹೊಟ್ಟೆಯಲ್ಲಿ ಮದ್ಯ ಕುಡಿಯುವುದು
ಡಾರ್ಕ್ ಬಣ್ಣದ ಮದ್ಯ ಕುಡಿಯುವುದು, ವೈನ್, ರಮ್, ಸ್ಕಾಚ್ ಈ ಬಗೆಯ ಮದ್ಯ ಸೇವನೆ
ಮದ್ಯ ಕುಡಿದಾಗ ಆಗಾಗ ಮೂತ್ರ ವಿಸರ್ಜನೆ ಹೋಗಬೇಕೆನಿಸುವುದು, ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಹ್ಯಾಂಗೋವರ್ ಉಂಟಾಗುವುದು
ಹ್ಯಾಂಗೋವರ್ ಆದಾಗ ಆಗುವ ತೊಂದರೆಗಳೇನು?
ತಲೆನೋವು
ಮೈಕೈ ನೋವು
ವಾಂತಿ
ಹೊಟ್ಟೆ ಹಾಳಾಗುವುದು
ಕಿಬ್ಬೊಟ್ಟೆ ನೋವು
ಸುಸ್ತು
ವರ್ಟಿಗೋ
ತೀವ್ರ ಉಸಿರಾಟ
ವಾಂತಿ
ಈ ಹ್ಯಾಂಗೋವರ್ ಕಡಿಮೆ ಮಾಡಲು ಏನು ಮಾಡಬೇಕು?
ಸಾಕಷ್ಟು ನೀರು ಕುಡಿಯಬೇಕು: ಸಾಕಷ್ಟು ನೀರು ಕುಡಿಯಬೇಕು, ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತಲೆನೋವು ಉಂಟಾಗುವುದು.
ನಿಂಬೆ ಪಾನೀಯ : ನಿಂಬುರಸ ಹಾಕಿ ಪಾನೀಯ ಕುಡಿಯುವುದರಿಂದ ಹ್ಯಾಂಗೋವರ್ ಸ್ವಲ್ಪ ಕಡಿಮೆಯಾಗುವುದು.
ನಿಂಬು ಪಾನೀಯ: ಎಳನೀರು ಕುಡಿಯುವುದರಿಂದ ದೇಹದಲ್ಲಿ ನಿರ್ಜಲೀಕರಣವಾಗುವುದನ್ನು ತಪ್ಪಿಸಬಹುದು, ಎಳನೀರಿಗೆ ಸ್ವಲ್ಪ ನಿಂಬೆರಸ ಹಿಂಡಿ ಕುಡಿದರೆ ಇನ್ನೂ ಒಳ್ಳೆಯದು.
ನೀರಿಗೆ ಜೇನು ಹಾಕಿ ಕುಡಿಯಿರಿ: ನೀರಿಗೆ ಜೇನು ಹಾಕಿ ಕುಡಿಯುವುದರಿಂದ ನಿಂಬು ಪಾನೀಯ ಕಡಿಮೆಯಾಗುವುದು. ಇದು ದೇಹದಲ್ಲಿ ಖನಿಜಾಂಶ ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತದೆ. ನಿಂಬು ಪಾನೀಯಾಗೆ ಸ್ವಲ್ಪ ಜೇನು ರಸ ಸೇರಿಸಿ ಕುಡಿದರೆ ಒಳ್ಳೆಯದು.
ಶುಂಠಿ: ಹ್ಯಾಂಗೋವರ್‌ನಿಂದ ವಾಂತಿಯಾಗುತ್ತಿದ್ದರೆ ಸ್ವಲ್ಪ ಶುಂಠಿಯ ತುಂಡು ಬಾಯಿಗೆ ಇಡುವುದು ಒಳ್ಳೆಯದು.
ಮೊಟ್ಟೆ: ಬೆಳಗ್ಗೆ ಎದ್ದು ಬೇಯಿಸಿದ ಮೊಟ್ಟೆ ತಿಂದರೆ ಇದರಲ್ಲಿರುವ ಅಮೈನೋ ಆಮ್ಲ ಹ್ಯಾಂಗೋವರ್ ಕಡಿಮೆಯಾಗುವುದು.
ಪುದೀನಾ: ಒಂದು ಕಪ್ ಟೀಗೆ ಪುದೀನಾ ಹಾಕಿ ಕುಡಿದರೆ ಹ್ಯಾಂಗೋವರ್ ಕಡಿಮೆಯಾಗುವುದು.
ಬಾಳೆಹಣ್ಣು ಸೇವಿಸಿ: ಪೊಟಾಷ್ಯಿಯಂ, ಮೆಗ್ನಿಷ್ಯಿಯಂ ಇರುವುದರಿಂದ ಬಾಳೆಹಣ್ಣು ಸೇವಿಸುವುದು ಒಳ್ಳೆಯದು. ಹಾಗಾಗಿ ಬಾಳೆಹಣ್ಣು ಸೇವಿಸುವುದು ಒಳ್ಳೆಯದು.