ಜೆರುಸಲೇಂ: ಖಾನ್ ಯೂನಿಸ್‌ನಲ್ಲಿ ನಡೆಸಿದ ದಾಳಿಯಲ್ಲಿ ಹಮಾಸ್‌ನ ಹಿರಿಯ ಅಧಿಕಾರಿ ಇಝ್-ಅಲ್ ದೀನ್ ಕಸಬ್‌ರನ್ನು ಕೊಂದು ಹಾಕಿರುವುದಾಗಿ ಇಸ್ರೇಲ್ ಸೇನೆ ಶುಕ್ರವಾರ ಹೇಳಿದೆ.

ಗಾಜಾ ಪಟ್ಟಿಯಲ್ಲಿರುವ ಇತರ ಸಂಘಟನೆಗಳೊಂದಿಗೆ ಸಮನ್ವಯ ವಹಿಸುವಲ್ಲಿ ಕಸಬ್ ಪ್ರಮುಖ ಪಾತ್ರ ವಹಿಸುತ್ತಿದ್ದರು.
ಕಸಬ್ ಸಾವನ್ನು ಹಮಾಸ್ ಬಂಡುಕೋರ ಸಂಘಟನೆಯೂ ಖಚಿತ ಪಡಿಸಿದ್ದು, 'ಅವರ ಸಾವಿಗೆ ದುಃಖ ವ್ಯಕ್ತ ಪಡಿಸುತ್ತೇವೆ' ಎಂದು ಹೇಳಿದೆ. ಅಲ್ಲದೆ ಮತ್ತೊಬ್ಬ ಅಧಿಕಾರಿ ಐಮನ್ ಆಯೆಷ್ ಕೂಡ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಪ್ರಕಟಣೆಯಲ್ಲಿ ತಿಳಿಸಿದೆ.