HEALTH TIPS

ಮಾನ್ಯದಲ್ಲಿ ಭಾರೀ ಕಳವು- ದೇವರ ರಜತ ಬಿಂಬ ವನ್ನೇ ಹೊತ್ತೊಯ್ದು ಚೋರರು

ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಭಾರೀ ಕಳವು ನಡೆದಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಮಾನ್ಯ ಶ್ರೀ ಅಯ್ಯಪ್ಪ ಮಂದಿರದ ಸ್ವಾಮಿಯ ರಜತ ಚಿತ್ರವನ್ನು ಕಳ್ಳರು ಹೊತ್ತೊಯ್ದಿದ್ದಾರೆ.ಭಾನುವಾರ ರಾತ್ರಿ ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ಗಮನಕ್ಕೆ ಬಂದಿದೆ.
ಮಂದಿರದ ಹೊರ ಬಾಗಿಲ ಬೀಗಮುರಿದು ಒಳ ಪ್ರವೇಶಿಸಿ, ಗರ್ಭಗೃಹದ ಬಾಗಿಲ ಬೀಗವನ್ನೂ ಪುಡಿಗಟ್ಟಿ ಈ ಕೃತ್ಯವೆಸಗಿರುವುದು ಕಂಡುಬಂದಿದೆ. ದಶಕಗಳಿಂದ ಜನರು ಪೂಜಿಸಿಕೊಂಡು ಬರುತ್ತಿರುವ ಈ ಸನ್ನಿಧಿಯ ಕಳವು ಕೃತ್ಯ ಸ್ಥಳೀಯರಲ್ಲಿ ಆತಂಕ ಹಾಗೂ ತೀವ್ರ ಕೋಪಕ್ಕೂ ಕಾರಣವಾಗಿದೆ. ಬದಿಯಡ್ಕ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಾಥಮಿಕ ತನಿಖೆ ನಡರಸಿ ಪ್ರಕರಣವನ್ನು ಊರ್ಜಿತಗೊಳಿಸಿದ್ದಾರೆ. ವಿವರ ತಿಳಿಯುತ್ತಿರುವಂತೆ ಅಸಂಖ್ಯ ಸಂಖ್ಯೆಯ ಜನರು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries