ಟೆಹರಾನ್: ಅಮೆರಿಕ ಹಾಗೂ ಇಸ್ರೇಲ್, ತನ್ನ ದೇಶದ ವಿರುದ್ಧ ಮಾಡುವ ಆಕ್ರಮಣಗಳಿಗೆ ತಕ್ಕ ಪ್ರತಿಕ್ರಿಯೆಯನ್ನು ನಿಸ್ಸಂದೇಹವಾಗಿ ಎದುರಿಸುತ್ತವೆ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಎಚ್ಚರಿಕೆ ನೀಡಿದ್ದಾರೆ.
ಟೆಹರಾನ್: ಅಮೆರಿಕ ಹಾಗೂ ಇಸ್ರೇಲ್, ತನ್ನ ದೇಶದ ವಿರುದ್ಧ ಮಾಡುವ ಆಕ್ರಮಣಗಳಿಗೆ ತಕ್ಕ ಪ್ರತಿಕ್ರಿಯೆಯನ್ನು ನಿಸ್ಸಂದೇಹವಾಗಿ ಎದುರಿಸುತ್ತವೆ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಎಚ್ಚರಿಕೆ ನೀಡಿದ್ದಾರೆ.
ಪ್ರತೀಕಾರದ ಸಾಧ್ಯತೆಯ ಬಗ್ಗೆ ಎಚ್ಚರ ವಹಿಸಿರುವ ಅಮೆರಿಕ, ಇರಾನ್ ಸುತ್ತಲೂ ಸೇನೆ ನಿಯೋಜನೆಯನ್ನು ಹೆಚ್ಚಿಸಿದೆ.
'ಇರಾನ್ ವಿರುದ್ಧ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುತ್ತಾರೋ, ಅದಕ್ಕೆ ತಕ್ಕಂತೆ ಹೀನಾಯ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂಬುದು ಅಮೆರಿಕ, ಯಹೂದಿ ಆಡಳಿತ (ಇಸ್ರೇಲ್) ಸೇರಿದಂತೆ ಶತ್ರುಗಳಿಗೆ ಗೊತ್ತಿರಬೇಕು' ಎಂದು ಹೇಳಿದ್ದಾರೆ.
ಇರಾನ್ ಸೇನೆ ಇಸ್ರೇಲ್ ಮೇಲೆ ಅಕ್ಟೋಬರ್ 1ರಂದು ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ, ಇಸ್ರೇಲ್ ಸೇನೆ ಇರಾನ್‌ನ ಸೇನಾ ನೆಲೆಗಳ ಮೇಲೆ ಕಳೆದವಾರ ಪ್ರತಿದಾಳಿ ನಡೆಸಿತ್ತು. ಈ ದಾಳಿಯನ್ನು ಅಮೆರಿಕ ಸಮರ್ಥಿಸಿಕೊಂಡಿತ್ತು.
ಬಳಿಕ ಪ್ರತಿಕ್ರಿಯಿಸಿದ್ದ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಇಸ್ರೇಲ್ ದಾಳಿಗೆ ಅಮೆರಿಕ ಕುಮ್ಮಕ್ಕು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
'ನಾವು ಯುದ್ಧವನ್ನು ಬಯಸುವುದಿಲ್ಲ. ಆದರೆ, ಯಹೂದಿಗಳ ಆಡಳಿತದ ಆಕ್ರಮಣಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ' ಎಂದು ಎಚ್ಚರಿಸಿದ್ದರು.