ಬೆಂಗಳೂರು: ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹುಬ್ಬಳ್ಳಿಯಿಂದ ಕೊಟ್ಟಾಯಂಗೆ ವಿಶೇಷ ರೈಲು ಘೋಷಿಸಲಾಗಿದೆ.
ಎಸ್.ಎಸ್.ಎಸ್. ಹುಬ್ಬಳ್ಳಿ-ಕೊಟ್ಟಾಯಂ ಹುಬ್ಬಳ್ಳಿಯು ಸಾಪ್ತಾಹಿಕ ವಿಶೇಷ ರೈಲು (07371/ 07372) ಮೂಲಕ ಕಾರ್ಯನಿರ್ವಹಿಸುತ್ತದೆ. ನವೆಂಬರ್ 19 ರಿಂದ ಜನವರಿ 14 ರವರೆಗೆ ಒಂಬತ್ತು ಸೇವೆಗಳನ್ನು ನಡೆಸಲಾಗುವುದು.
ರೈಲು ಹುಬ್ಬಳ್ಳಿಯಿಂದ ಪ್ರತಿ ಮಂಗಳವಾರ ಮಧ್ಯಾಹ್ನ 3.15ಕ್ಕೆ ಹೊರಟು ಮರುದಿನ ಮಧ್ಯಾಹ್ನ 12 ಗಂಟೆಗೆ ಕೊಟ್ಟಾಯಂಗೆ ತಲುಪುತ್ತದೆ. ಹಿಂದಿರುಗುವ ರೈಲು ಬುಧವಾರ ಮಧ್ಯಾಹ್ನ 3 ಗಂಟೆಗೆ ಕೊಟ್ಟಾಯಂನಿಂದ ಹೊರಟು ಮರುದಿನ ಮಧ್ಯಾಹ್ನ 12.50 ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಎಸ್.ಎಂ.ವಿ.ಟಿ. ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪುರ್, ಪೆÇದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್ ಮತ್ತು ಎಟುಮನೂರ್‍ಗಳಲ್ಲಿ ನಿಲ್ದಾಣಗಳಿರಲಿವೆ.