ಪೆರ್ಲ:ಶೇಣಿ ಶಾಲೆಯಲ್ಲಿ ಜರಗಿದ 63ನೇ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಸಂಬಂಧಿಸಿದ ಸ್ಪರ್ಧೆಗಳ ಮೊಮೆಂಟೊಗಳು ಮತ್ತು ಟ್ರೋಫಿಗಳು ಇಂದು (ನ.22) ಮಧ್ಯಾಹ್ನದ ನಂತರ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿತರಿಸಲಾಗುತ್ತದೆ. ಸಂಬಂಧಪಟ್ಟ ಅಧ್ಯಾಪಕರು ಶಾಲೆಗೆ ಬಂದು ಅದನ್ನು ಸ್ವೀಕರಿಸಬೇಕಾಗಿ ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ :9495863244 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.