ಬದಿಯಡ್ಕ: ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲೆ ನ. 3 ರಂದು ನಡೆದ ಆಕ್ರಮಣ ಕುರಿತು ಶಿವಳ್ಳಿ ಬ್ರಾಹ್ಮಣ ಸಮಾಜದ ಸದಸ್ಯರ ಸಂಘಟನೆ ಶಿವಳ್ಳಿ ಬ್ರಾಹ್ಮಣ ಸಭಾ(ರಿ) ಕಾಸರಗೋಡು ಇದರ ವತಿಯಿಂದ ನವೆಂಬರ್ 6 ಬುಧವಾರ ಪೂರ್ವಾಹ್ನ 11 ಘಂಟೆಗೆ ಎಡನೀರು ಮಠದಲ್ಲಿ ಸ್ವಾಮಿಗಳನ್ನು ಭೇಟಿಮಾಡಿ ವಿಷಯವನ್ನು ಅವರೊಡನೆ ಚರ್ಚಿಸಿ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿ.
ಘಟನೆಯನ್ನು ಖಂಡಿಸಿ, ಖಂಡನಾ ನಿರ್ಣಯ ಕೈಗೊಂಡು ಮಠದ ಆಡಳಿತಾಧಿಕಾರಿಗೆ ಒಪ್ಪಿಸಲಾಯಿತು. ಈ ಸಂದರ್ಭ ಸಮಾಜದ ಸದಾ ಬೆಂಬಲ ನೀಡುವ ಹೇಳಿಕೆಯನ್ನು ಉಲ್ಲೇಖಿಸಲಾಯಿತು.
ಸಂಘದ ಅಧ್ಯಕ್ಷ ಮಂಜುನಾಥ.ಟಿ.ಕೆ, ಪ್ರಧಾನ ಕಾರ್ಯದರ್ಶಿ ಚೇತನ ರಾಮ ನೂರಿತ್ತಾಯ, ಖಜಾಂಚಿ ಸೀಮಾ ಬಳ್ಳುಳ್ಳಾಯ, ಯುಎಂಬಿಎಸ್ ಮಹಿಳಾ ಉಪಾಧ್ಯಕ್ಷೆ ವೀಣಾ ಕಡಮಣ್ಣಾಯ, ಮಹಿಳಾ ಅಧ್ಯಕ್ಷೆ ಸಂಧ್ಯಾ ಕೆದಿಲಾಯ, ಉದ್ಯಮಿ ವಸಂತ ಭಟ್, ಶ್ರೀನಿವಾಸ ಅಮ್ಮಣ್ಣಾಯ,ಮಠದ ಪ್ರಧಾನ ಪುರೋಹಿತ ಚಕ್ರಪಾಣಿ ದೇವಪೂಜಿತ್ತಾಯ ಸಹಿತ ಸದಸ್ಯರು ಭಾಗವಹಿಸಿದ್ದರು.ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯರು ಉಪಸ್ಥಿತರಿದ್ದರು.