ಕಾಸರಗೋಡು: ಪಿಂಚಣಿದಾರರ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೇರಳ ಸರ್ವಿಸ್ ಪೆನ್ಶನರ್ಸ್ ಲೀಗ್(ಕೆಎಸ್‍ಪಿಎಲ್) ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.
ಪಿಂಚಣಿ ಪರಿಷ್ಕರಣೆ ಜಾರಿ, ರಿಯಾಯಿತಿ ಬಾಕಿ ವಿತರಿಸಬೇಕು, ಹಿಂದಿನ ವೇತನ ಪರಿಷ್ಕರಣೆಯ ನಾಲ್ಕನೇ ಕಂತಿನ ಮೊತ್ತ ವಿತರಿಸಬೇಕು, ಮೆಡಿಸಪ್ ಯೋಜನೆಯನ್ನು ಪರಿಪೂರ್ಣಗೊಳಿಸಬೇಖು, ಸಹಕಾರಿ ಪಿಂಚಣಿ ಸುಧಾರಣೆಯ ತಕ್ಷಣದ ಅನುಷ್ಠಾನ, ಸಹಕಾರಿ ಪಿಂಚಣಿ ಡಿ. ಎ. ಇ. ಪಿ. ಎಫ್ ಪಿಂಚಣಿಗೆ ಸಂಬಂಧಿಸಿದ ನ್ಯಾಐಆಲಯ ತೀರ್ಪು ಅನುಷ್ಠಾನಗೊಳಿಸಬೇಕೆಂಬ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.
ಐಯುಎಂಎಲ್ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ಲಕುಞÂ ಧರಣಿ ಉದ್ಘಾಟಿಸಿದರು. ಕೆಎಸ್‍ಪಿಎಲ್ ಜಿಲ್ಲಾಧ್ಯಕ್ಷ ಎಂ. ಎ. ಮಕ್ಕಾರ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಮೂಸಾ ಬಿ. ಚೆರ್ಕಳ, ಎಸ್‍ಟಿಯು ಜಿಲ್ಲಾಧ್ಯಕ್ಷ ಎ. ಅಹ್ಮದ್ ಹಾಜಿ, ಎಸ್.ಇ.ಯು ರಾಜ್ಯ ಕಾರ್ಯದರ್ಶಿ ನಾಸರ್ ನಂಗಾರತ್, ಒ. ಎಂ. ಶಫೀಕ್, ಮುಖಂಡರಾದ ಮಜೀದ್ ಸಂತೋಷ್ ನಗರ, ಟಿ. ಇ. ಮುಖ್ತಾರ್, ಎ. ಜಿ. ಸಿದ್ದೀಕ್, ಅಬ್ದುಲ್ಲಾ ಚಾಲಾ, ಶಾಫಿ ಮಾಪಿಲಕ್ಕುಂದ್, ಸಂಸ್ದೀನ್ ಕೊಡವಂಚಿ, ಮಾಹಿನ್‍ಮಾಸ್ಟರ್, ಅಬ್ದುಲ್‍ಖಾದರ್, ಚೇರೂರು, ಪಿ. ಮೂಸ ಕುಟ್ಟಿ ತ್ರಿಕರಿಪುರ ನೇತೃತ್ವ ವಹಿಸಿದ್ದರು. ಜಿಲ್ಲಾ ಜಿ, ಕಾರ್ಯದರ್ಶಿ ಸಫರುಲ್ಲಾ ಸ್ವಾಗತಿಸಿದರು.