ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯ ಆಡಳಿತಕ್ಕಾಗಿ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡುತ್ತಿರುವ ಪ್ರಕ್ರಿಯೆಯು ನಿಧಾನಗತಿಯಲ್ಲಿ ನಡೆದಿದೆ.
ಮೊದಲ ಅವಧಿಯಲ್ಲಿ ತಮ್ಮ ತಂಡದೊಳಗಿನ ಆಂತರಿಕ ಬೇಗುದಿಯಿಂದ ಹಲವು ಬಾರಿ ಮುಜುಗರಕ್ಕೀಡಾಗಿದ್ದ ಟ್ರಂಪ್, ಈ ಬಾರಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದು ವಿಭಿನ್ನ ತಂಡವೊಂದನ್ನು ರೂಪಿಸುತ್ತಿದ್ದಾರೆ.
ತಮ್ಮ ಪ್ರಭಾವ, ವ್ಯಕ್ತಿತ್ವಕ್ಕೆ ಎಲ್ಲಿಯೂ ಚ್ಯುತಿಯಾಗದಂತೆ ನೋಡಿಕೊಳ್ಳುವ ಜೊತೆಗೆ ವರ್ಚಸ್ಸನ್ನು ವೃದ್ಧಿಸುವಂತಹ ತಂಡ ಕಟ್ಟುವಲ್ಲಿ ಆಸಕ್ತರಾಗಿದ್ದು, ಫೆಡರಲ್ ಸರ್ಕಾರದ ವರ್ಚಸ್ಸು ಹೆಚ್ಚಿಸುವರಿಗೆ ಮನ್ನಣೆ ನೀಡುತ್ತಿದ್ದಾರೆ.
ಕೆಲವೊಬ್ಬರ ಆಯ್ಕೆಯು ಈಗಾಗಲೇ ಕೆಲವು ರಿಪಬ್ಲಿಕನ್ನರ ಅಸಮಾಧಾನಕ್ಕೂ ಕಾರಣವಾಗಿದ್ದು, ಸೆನೆಟ್‌ನಲ್ಲಿ ತೀವ್ರ ಪ್ರತಿರೋಧ ಎದುರಿಸಬೇಕಾದ ಸ್ಥಿತಿಯೂ ನಿರ್ಮಾಣವಾಗಿದೆ.
ನೇಮಕಗೊಂಡ ಪ್ರಮುಖರು: ವಿದೇಶಾಂಗ ಕಾರ್ಯದರ್ಶಿ- ಮಾರ್ಕೊ ರುಬಿಯೊ, ಅಟಾರ್ನಿ ಜನರಲ್- ಮ್ಯಾಟ್ ಗೆಟ್ಜ್, ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ- ತುಳಸಿ ಗಬ್ಬಾರ್ಡ್, ರಕ್ಷಣಾ ಕಾರ್ಯದರ್ಶಿ- ಪೀಟ್ ಹೆಗ್ಸೆತ್, ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಸೆಕ್ರೆಟರಿ- ಕ್ರಿಸ್ಟಿ ನೋಮ್.
ಸಿಐಎ ನಿರ್ದೇಶಕ- ಜಾನ್ ರಾಟ್‌ಕ್ಲಿಫ್, ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ- ರಾಬರ್ಟ್ ಎಫ್. ಕೆನಡಿ ಜೂನಿಯರ್, ಹಿರಿಯರ ವ್ಯವಹಾರಗಳ ಕಾರ್ಯದರ್ಶಿ- ಡಗ್ ಕಾಲಿನ್ಸ್, ಆಂತರಿಕ ಕಾರ್ಯದರ್ಶಿ- ಡಗ್ ಬರ್ಗಮ್, ಪರಿಸರ ಸಂರಕ್ಷಣಾ ಸಂಸ್ಥೆ ನಿರ್ವಾಹಕರು- ಲೀ ಜೆಲ್ಡಿನ್.
ಶ್ವೇತಭವನ: ಸಿಬ್ಬಂದಿ ಮುಖ್ಯಸ್ಥ-ಸೂಸಿ ವೈಲ್ಸ್, ರಾಷ್ಟ್ರೀಯ ಭದ್ರತಾ ಸಲಹೆಗಾರ- ಮೈಕ್ ವಾಟ್ಜ್, ಗಡಿ ಭದ್ರತೆಯ ಮುಖ್ಯಸ್ಥ- ಟಾಮ್ ಹೋಮನ್, ನೀತಿಯ ಉಪ ಮುಖ್ಯಸ್ಥ- ಸ್ಟೀಫನ್ ಮಿಲ್ಲರ್.
ಸಿಬ್ಬಂದಿ ಉಪ ಮುಖ್ಯಸ್ಥರು- ಡಾನ್ ಸ್ಕಾವಿನೊ, ಜೇಮ್ಸ್ ಬ್ಲೇರ್, ಟೇಲರ್ ಬುಡೋವಿಚ್, ವೈಟ್ ಹೌಸ್ ಕೌನ್ಸಿಲ್- ವಿಲಿಯಂ ಮೆಕ್‌ಗ್ಲಿನೆ.
ರಾಯಭಾರಿಗಳು, ಮಧ್ಯಪ್ರಾಚ್ಯ- ಸ್ಟೀವನ್ ವಿಟ್ಕಾಫ್, ಇಸ್ರೇಲ್- ಮೈಕ್ ಹುಕಾಬಿ, ವಿಶ್ವಸಂಸ್ಥೆ- ಎಲಿಸ್ ಸ್ಟೆಫಾನಿಕ್.