ಕಾಸರಗೋಡು: ಜಿಲ್ಲೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಭಾರತೀಯ ಸೇನೆಯ ತಾಂತ್ರಿಕ ವಿಭಾಗವಾದ ಇಒಇ (corps of Electronics & Mechanical Engineers) ನಿಂದ ನಿವೃತ್ತರಾದ ಸೈನಿಕರ ಸಂಘಟನೆ ವತಿಯಿಂದ ಕಾಪ್ರ್ಸ್ ದಿನವನ್ನು ಆಚರಿಸಲಾಯಿತು. ಸಂಸ್ಥೆ 82ನೇ ವರ್ಷಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಞಂಗಾಡ್ ರಾಜ್ ರೆಸಿಡೆನ್ಸಿಯಲ್ಲಿ ನಡೆದ ಕುಟುಂಬ ಸಮ್ಮಿಲನವನ್ನು ಹೊಸದುರ್ಗ ಇನ್ಸ್‍ಪೆಕ್ಟರ್ ಅಜಿತ್ ಉದ್ಘಾಟಿಸಿದರು. ಅಧ್ಯಕ್ಷ ಪ್ರಸಾದ್ ಓ ನಾಯರ್ ಅಧ್ಯಕ್ಷತೆ ವಹಿಸಿದ್ದರು. ದ್ರೋಣಾಚಾರ್ಯ ಪದಕ ವಿಜೇತ ಭಾಸ್ಕರನ್ ಮತ್ತು ಇಎಂಇ ಮುಖ್ಯ ಸಂಯೋಜಕ ಕೆ.ಕೆ.ಸಂತೋಷ್ ಮೆನನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಇಎಂಇ ಕಾಪ್ರ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರ ಪಾಲಕರನ್ನು ಹುತಾತ್ಮರಾದ ತುರುತ್ತಿ ಪೂರ್ವ ಮುರಿಯ ಕೆ.ವಿ. ಅಶ್ವಿನ್ ಅವರ ಪೆÇೀಷಕರು, 75 ವರ್ಷ ಪೂರೈಸಿದ ಮಾಜಿ ಸೈನಿಕರು ಮತ್ತು ಮಾಜಿ ಸೈನಿಕರ ಪೆÇೀಷಕರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಈ ಸಂದರ್ಭ ಕಲಾ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮುಖ್ಯ ಸಂಯೋಜಕ ವಸಂತನ್ ಪಿ, ತಂಬಾನ್ ಕೆ, ಸಿ.ಪಿ. ಬಾಲಚಂದ್ರನ್, ಟಿ.ಕೆ. ನಾರಾಯಣನ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಕೆ.ಮುರಳೀಧರನ್ ಸ್ವಾಗತಿಸಿದರು. ಕೋಶಾಧಿಕಾರಿ ಪಿ. ರಾಜೇಂದ್ರ ವಂದಿಸಿದರು.