HEALTH TIPS

ಶೀಘ್ರದಲ್ಲಿಯೇ ಹೈಡ್ರೋಜನ್ ರೈಲಿಗೆ ಚಾಲನೆ; ಒಂದು ಗಂಟೆ ಚಲಿಸಲು ಎಷ್ಟು ಲೀಟರ್ ನೀರು ಬೇಕು?

 ಭಾರತದಲ್ಲಿ ಶೀಘ್ರದಲ್ಲೇ ನೀರಿನ ಆಳದಲ್ಲಿ ರೈಲುಗಳು ಚಲಿಸಲಿವೆ. ಈ ರೈಲುಗಳಿಗೆ ಪೆಟ್ರೋಲ್, ಡೀಸೆಲ್, ವಿದ್ಯುತ್ ಅಗತ್ಯವಿಲ್ಲ. ಈ ರೈಲುಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಆವಿಯಿಂದ ಚಲಿಸುವ ಎಂಜಿನ್‌ನಿಂದ ಹಿಡಿದು ಕಲ್ಲಿದ್ದಲು ಹೊಗೆಯನ್ನು ಹೊರಸೂಸುವ ರೈಲುಗಳವರೆಗೆ ಭಾರತೀಯ ರೈಲ್ವೆ ಹಲವು ಬದಲಾವಣೆಗಳನ್ನು ಕಂಡಿದೆ.


ಇಂದು ಭಾರತೀಯ ರೈಲ್ವೆಯ ರೈಲುಗಳು ಡೀಸೆಲ್ ಮತ್ತು ವಿದ್ಯುತ್ತಿನಲ್ಲಿ ಚಲಿಸುತ್ತವೆ.

ವಂದೇ ಭಾರತ್, ಶತಾಬ್ದಿ, ತೇಜಸ್‌ನಂತಹ ಐಷಾರಾಮಿ ರೈಲುಗಳು ಚಾಲನೆಯಲ್ಲಿರುವಾಗ, ಬುಲೆಟ್ ರೈಲು ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಇಷ್ಟೆಲ್ಲದರ ನಡುವೆ, ಮುಂದಿನ ತಿಂಗಳಿನಿಂದ, ಡೀಸೆಲ್ ಅಥವಾ ವಿದ್ಯುತ್ ಅಗತ್ಯವಿಲ್ಲದ, ನೀರಿನಲ್ಲಿ ಚಲಿಸುವ ರೈಲು ಚಾಲನೆಗೆ ಬರಲಿದೆ.

ದೇಶದಲ್ಲೇ ಮೊದಲ ಬಾರಿಗೆ ನೀರಿನಿಂದ ಚಲಿಸುವ ರೈಲು ಚಾಲನೆಗೆ ಬರಲಿದೆ. ಈ ರೈಲನ್ನು ಹೈಡ್ರೋಜನ್ ರೈಲು ಎಂದು ಕರೆಯಲಾಗುತ್ತದೆ. ಈ ರೈಲಿನ ಪ್ರಾಯೋಗಿಕ ಓಟ 2024ರ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. 2024 ರ ಡಿಸೆಂಬರ್‌ನಲ್ಲಿ ಅದರ ಪ್ರಾಯೋಗಿಕ ಓಟಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಹೈಡ್ರೋಜನ್‌ನಿಂದ ಚಲಿಸುವ ಈ ರೈಲಿಗೆ ಒಂದು ಗಂಟೆಗೆ 40,000 ಲೀಟರ್ ನೀರು ಬೇಕಾಗುತ್ತದೆ. ಇದಕ್ಕಾಗಿ ನೀರಿನ ಸಂಗ್ರಹ ಘಟಕವನ್ನು ನಿರ್ಮಿಸಲಾಗುತ್ತದೆ

'ನೀರಿನಿ ಆವಿಯಿಂದ' ಚಲಿಸುವ ಹೈಡ್ರೋಜನ್ ರೈಲಿನ ಹೈಡ್ರೋಜನ್ ಇಂಧನ ಕೋಶ ಮತ್ತು ಮೂಲಸೌಕರ್ಯ ಪರೀಕ್ಷೆ ಯಶಸ್ವಿಯಾಗಿದೆ. ಕೋಶ ಮತ್ತು ಹೈಡ್ರೋಜನ್ ಘಟಕದ ವಿನ್ಯಾಸವನ್ನು ಅನುಮೋದಿಸಲಾಗಿದೆ.

ದೇಶಾದ್ಯಂತ 35 ಹೈಡ್ರೋಜನ್ ರೈಲುಗಳನ್ನು ಚಾಲನೆ ಮಾಡಲು ಸಿದ್ಧಪಡಿಸಲಾಗುತ್ತಿದೆ. ರೈಲ್ವೆ ಮಾಹಿತಿಯ ಪ್ರಕಾರ, ಒಂದು ಹೈಡ್ರೋಜನ್ ರೈಲಿನ ಬೆಲೆ ಸುಮಾರು 80 ಕೋಟಿ ರೂ.

ನೀರಿನಲ್ಲಿ ರೈಲು ಹೇಗೆ ಚಲಿಸುತ್ತದೆ ಎಂದು ಜನರು ಆಶ್ಚರ್ಯಪಡಬಹುದು. ಭಾರತೀಯ ರೈಲ್ವೆ 2030 ರ ವೇಳೆಗೆ ಇಂಗಾಲದ ಹೊರಸೂಸುವಿಕೆ ಇಲ್ಲದ ಸ್ಥಿತಿಯನ್ನು ಸೃಷ್ಟಿಸಲು ಗುರಿ ಹೊಂದಿದೆ. ಈ ಗುರಿಯತ್ತ ಸಾಗುವ ಪ್ರಯತ್ನವಾಗಿ, ಹೈಡ್ರೋಜನ್ ರೈಲುಗಳನ್ನು ಚಾಲನೆ ಮಾಡಲು ರೈಲ್ವೆ ನಿರ್ಧರಿಸಿದೆ. ಈ ರೈಲುಗಳ ಚಾಲನೆ 2024-25ರಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.

ಹೈಡ್ರೋಜನ್ ರೈಲಿನಲ್ಲಿ ಡೀಸೆಲ್ ಎಂಜಿನ್‌ಗಳ ಬದಲಿಗೆ ಹೈಡ್ರೋಜನ್ ಇಂಧನ ಕೋಶಗಳಿವೆ. ಅವು ಇಂಗಾಲದ ಡೈಆಕ್ಸೈಡ್, ಸಾರಜನಕ ಅಥವಾ ಇಂಗಾಲದ ಕಣಗಳನ್ನು ಹೊರಸೂಸುವುದಿಲ್ಲ. ಈ ರೈಲುಗಳನ್ನು ಚಾಲನೆ ಮಾಡುವ ಮೂಲಕ ಪರಿಸರ ಮಾಲಿನ್ಯವನ್ನು ನಿಯಂತ್ರಿಸಬಹುದು.

ಹೈಡ್ರೋಜನ್ ಇಂಧನ ಕೋಶಗಳ ಸಹಾಯದಿಂದ, ಈ ರೈಲಿನಲ್ಲಿ ಹೈಡ್ರೋಜನ್ ಮತ್ತು ಆಮ್ಲಜನಕವನ್ನು ಪರಿವರ್ತಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ವಿದ್ಯುತ್ ರೈಲನ್ನು ಚಲಾಯಿಸಲು ಬಳಸಲಾಗುತ್ತದೆ. ಹೈಡ್ರೋಜನ್ ಅನಿಲದಲ್ಲಿ ಚಲಿಸುವ ಎಂಜಿನ್‌ಗಳು ಹೊಗೆಗೆ ಬದಲಾಗಿ ನೀರಾವಿ ಮತ್ತು ನೀರನ್ನು ಹೊರಸೂಸುತ್ತವೆ.

ಈ ರೈಲಿನಲ್ಲಿ ಡೀಸೆಲ್ ಎಂಜಿನ್‌ಗಿಂತ ಶೇ.60 ರಷ್ಟು ಕಡಿಮೆ ಶಬ್ದ ಬರುತ್ತದೆ. ಇದರ ವೇಗ ಮತ್ತು ಪ್ರಯಾಣಿಕರ ಸಾಮರ್ಥ್ಯ ಡೀಸೆಲ್ ರೈಲಿಗೆ ಸಮನಾಗಿರುತ್ತದೆ.

ದೇಶದ ಮೊದಲ ಹೈಡ್ರೋಜನ್ ರೈಲು ಹರಿಯಾಣದಲ್ಲಿ ಜಿಂದ್-ಸೋನಿಪತ್ ಮಾರ್ಗದಲ್ಲಿ 90 ಕಿ.ಮೀ. ದೂರ ಚಲಿಸಲಿದೆ ಎನ್ನಲಾಗಿದೆ. ಇದಲ್ಲದೆ, ಈ ರೈಲನ್ನು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ, ನೀಲಗಿರಿ ಪರ್ವತ ರೈಲು, ಕಲ್ಕಾ ಶಿಮ್ಲಾ ರೈಲು, ಮಾಥೆರಾನ್ ರೈಲ್ವೆ, ಕಾಂಗ್ರಾ ಕಣಿವೆ, ಬಿಲ್ಮೋರಾ ವಾಗೈ ಮತ್ತು ಮಾರ್ವಾರ್-ದೇವ್‌ಗಢ್ ಮಾಧ್ರಿಯಾ ಮಾರ್ಗಗಳಲ್ಲಿ ಚಲಾಯಿಸಲು ರೈಲ್ವೆ ಯೋಜಿಸಿದೆ.

ಈ ರೈಲು ಗಂಟೆಗೆ 140 ಕಿ.ಮೀ. ವೇಗದಲ್ಲಿ ಚಲಿಸುತ್ತದೆ ಎಂದು ನಂಬಲಾಗಿದೆ. ಈ ರೈಲನ್ನು ಸತತವಾಗಿ 1000 ಕಿ.ಮೀ.ವರೆಗೆ ಚಲಾಯಿಸಬಹುದು ಎಂದು ಹೇಳಲಾಗುತ್ತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries