ಬದಿಯಡ್ಕ: ಬದಿಯಡ್ಕ ಬಂಟರ ಸಂಘದ ವತಿಯಿಂದ ತುಡರ್ ಪರ್ಬ ಕಾರ್ಯಕ್ರಮ ಮೇಗಿನ ಕಡಾರು ತರವಾಡು ಮನೆಯಲ್ಲಿ ಜರಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ ವಹಿಸಿದ್ದರು. ಮೇಗಿನ ಕಡಾರು ತರವಾಡು ಮನೆಯ ಯಜಮಾನ ಮಹಾಬಲ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಬಂಟ ಜನಾಂಗದಲ್ಲಿ ತುಡರ್ ಪರ್ಬ ಎಂದ ವಿಷಯದಲ್ಲಿ ನೀಡುತ್ತಾ ಅಧ್ಯಾಪಕ ವಿಶ್ವನಾಥ ರೈ ಮೇಗಿನ ಕಡಾರು ಉಪನ್ಯಾಸ ನೀಡಿದರು.
ಬಂಟರು ಅನಾದಿಕಾಲದಿಂದಲೇ ತುಳುನಾಡಿನ ಕೃಷಿ ಪರಂಪರೆಯನ್ನು ಮುಂದುವರಿಸಿ ಬಲಿಪಾಡ್ಯಮಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದರು.. ಬಂಟರು ಸಮಾಜಕ್ಕೆ ನೀಡಿದ ಕೊಡುಗೆ ನಮ್ಮಲ್ಲಿರುವ ವಿವಿಧ ಮೌಢ್ಯಗಳನ್ನು ಬಿಟ್ಟು ಸಮಾಜದಲ್ಲಿ ಉನ್ನತಿಯನ್ನು ಕಾಣಬೇಕು ಎಂದು ಕರೆ ನೀಡಿದರು.
ಕುಂಬಳೆ ವಲಯ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ, ಪ್ರಧಾನ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ, ಗ್ರಾ.ಪಂ.ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಧಾರ್ಮಿಕ ಸಾಮಾಜಿಕ ಮುಂದಾಳು ರಮನಾಥ ರೈ ಮೇಗಿನ ಕಡಾರು ವಿಶೇಷ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ನಾನ, ಜೊತೆ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ರತೀಶ್ ರೈ ವಳಮಲೆ ಉಪಸ್ಥಿತರಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ಗೂಡುದೀಪ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿ, ಕೋಶಾಧಿಕಾರಿ ದಯಾನಂದ ರೈ ವಂದಿಸಿದರು. ತರವಾಡು ಮನೆಯಲ್ಲಿ ಬಲಿಪಾಡ್ಯಮಿ ಪ್ರಯುಕ್ತ ತಂಬಿಲ, ಬಲೇಂದ್ರ ಪೂಜೆ ಜರಗಿತು.
ಅಭಿಮತ:
ಬಂಟ ಸಮುದಾಯದ ಪರ್ವಗಳು ಆಚಾರಗಳು, ಪದ್ಧತಿಗಳು ಸಮುದಾಯದ ಮುಂದಿನ ತಲೆಮಾರು ಜನಾಂಗದವರಿಗೆ ತಿಳಿಯಬೇಕಿದೆ.. ಯುವ ಜನಾಂಗದವರು ದಾರಿ ತಪ್ಪದೇ ಸಮುದಾಯದ ಪದ್ಧತಿಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಸಂಘದ ಕರ್ತವ್ಯವಾಗಿದೆ.
-ನಿರಂಜನ್ ರೈ ಪೆರಡಾಲ (ಅಧ್ಯಕ್ಷರು ಬಂಟರ ಸಂಘ ಬದಿಯಡ್ಕ)