ಕಾಸರಗೋಡು: ಎಡನೀರುಶ್ರೀಗಳು ಸಂಚರಿಸುತ್ತಿದ್ದ ವಾಹನದ ಮೇಲೆ ಬೋವಿಕ್ಕಾನದ ಬಾವಿಕೆರೆಯಲ್ಲಿ ದಾಳಿ ನಡೆಸಿದ್ದು, ವ್ಯಾಪಕ ಪ್ರತಿಬಟನೆಗೆ ಕಾರಣವಾಗಿದೆ. ಭಾನುವಾರ ಶ್ರೀಗಳು ಚೆರುಪುಳದಿಂದ ವಾಪಸಾಗುವ ಮಧ್ಯೆ, ರಾಜ್ಯಮಟ್ಟದ ಸೈಕಲ್ ರ್ಯಾಲಿಯೊಂದು ರಸ್ತೆಯಲ್ಲಿ ಹಾದುಹೋಗುತ್ತಿದ್ದ ಹಿನ್ನೆಲೆಯಲ್ಲಿ ಇರಿಯಣ್ಣಿಯಲ್ಲಿ ಕಾರಿಗೆ ತಡೆಯೊಡ್ಡಲಾಗಿತ್ತು. ಎಡನೀರು ಶ್ರೀಗಳು ಸಂಚರಿಸುತ್ತಿರುವ ವಾಹನ ಎಂದು ತಿಳಿಯುತ್ತಿದ್ದಂತೆ ಕಾರಿಗೆ ಮುಂದಕ್ಕೆ ತೆರಳಲು ಅವಕಾಶಮಾಡಿಕೊಟ್ಟಿದ್ದರು. ಮುಂದೆ ಬಾವಿಕೆರೆಯಲ್ಲಿ ಸೈಕಲ್ ರ್ಯಾಲಿಯ ಕಾರ್ಯಕರ್ತರೆನ್ನಲಾದ ಕೆಲವೇ ಮಂದಿಯಿದ್ದ ತಂಡ ಕಾರಿಗೆ ತಡೆಯೊಡ್ಡಿ, ಲಾಟಿಯಿಂದ ಬಡಿದಿದೆ. ಆಸುಪಾಸಿನವರು ಕೃತ್ಯದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಸ್ವಾಮೀಜಿ ಕಾರಿಗೆ ಲಾಟಿಪ್ರಹಾರ ನಡೆಸಿದ ಕೃತ್ಯ ಕಾಡ್ಗಿಚ್ಚಿನಂತೆ ವ್ಯಾಪಿಸಿದೆ. ಸೋಮವಾರ ಎಡನೀರು ಮಠದ ವಠಾರದಲ್ಲಿ ಪಕ್ಷಭೇದ ಮರೆತು ನೂರಾರು ಮಂದಿ ಪ್ರತಿಭಟನೆ ನಡೆಸಿ, ಕೃತ್ಯವನ್ನು ಖಂಡಿಸಿದ್ದರು.
ಖಂಡನೆ:
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿ ಖಂಡನೀಯ ಎಂದು ಮಧೂರು ಕ್ಷೇತ್ರ ಪುನರ್ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ತಿಳಿಸಿದೆ. ಸ್ವಾಮೀಜಿ ಅವರ ಕಾರನ್ನೇ ಪ್ರತ್ಯೇಕವಾಗಿ ಕೇಂದ್ರೀಕರಿಸಿ ಆಕ್ರಮಿಸಿರುವುದು ಪೂರ್ವಯೋಜಿತ ಕೃತ್ಯವಾಗಿದೆ. ಸಮಾಜದ ಭಾವೈಕ್ಯತೆಗೆ ಸದಾ ಶ್ರಮಿಸುತ್ತಿರುವ ಸಂಪೂಜ್ಯರ ವಾಹನದ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಮಿತಿ ಪದಾಧಿಕಾರಿಗಳು ಸಂಬಂಧಪಟ್ಟ ಪೆÇಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ಖಾರಿಗೆ ಹಾನಿಯೆಸಗಿದ ಕೃತ್ಯ ಖಂಡಿಸಿ ಮಠದ ವಠಾರದಲ್ಲಿ ಸೋಮವಾರ ಪಕ್ಷಭೇದ ಮರೆತು ನೂರಾರು ಮಂದಿಯನ್ನೊಳಗೊಂಡ ಪ್ರತಿಭಟನೆಯಲ್ಲಿ ಶಾಸಕ ಎನ್.ಎ ನೆಲ್ಲಿಕುನ್ನು ಮಾತನಾಡಿದರು.