ಬುಧವಾರದಿಂದಲೇ ನೆಲಸಮಗೊಳಿಸುವ ಕೆಲಸ ಆರಂಭಗೊಂಡಿತು. ಮೂರು ದಶಕಗಳ ಹಿಂದೆ ಜೆಡಿಎಗೆ ಸೇರಿದ ಮೂತಿ ಕ್ಯಾಂಪ್ ಪ್ರದೇಶದಲ್ಲಿ ಕಾಶ್ಮೀರದ ಪಂಡಿತರು ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನೇ ನೆಲಸಮ ಮಾಡಲಾಗಿದೆ' ಎಂದು ಅಧಿಕಾರಿಗಳು ಸಮರ್ಥಿಸಿಕೊಂಡರು.
ಸ್ಥಳಕ್ಕೆ ಭೇಟಿ ನೀಡಿದ ಪರಿಹಾರ ವಿಭಾಗದ ಆಯುಕ್ತ ಅರವಿಂದ್ ಕರ್ವಾನಿ, ಪರಿಸ್ಥಿತಿಯ ಪರಾಮರ್ಶೆ ನಡೆಸಿದರು.
'ಅಂಗಡಿಗಳು ಇದ್ದ ಜಾಗವು ಜೆಡಿಎಗೆ ಸೇರಿದ್ದಾಗಿದೆ. ಮುಥಿ-2ನೇ ಹಂತದಲ್ಲಿ ಹೊಸತಾಗಿ ಅಂಗಡಿಗಳನ್ನು ನಿರ್ಮಿಸಲಾಗುತ್ತಿದ್ದು, ಆ ಜಾಗದಲ್ಲೇ ಅಂಗಡಿ ಕಳೆದುಕೊಂಡವರಿಗೆ ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು' ಎಂದು ಭರವಸೆ ನೀಡಿದರು.
ಜೆಡಿಎ ನಿರ್ಧಾರಕ್ಕೆ ಬಿಜೆಪಿ, ಪಿಡಿಪಿ, ಅಪ್ನಿ ಪಕ್ಷ ಹಾಗೂ ಕಾಶ್ಮೀರ ಪಂಡಿತರ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸಂತ್ರಸ್ತರಿಗೆ ಕೂಡಲೇ ಹೊಸ ಮಳಿಗೆಗಳನ್ನು ಸ್ಥಾಪಿಸಿಕೊಡಬೇಕು ಎಂದು ಆಗ್ರಹಿಸಿವೆ.