HEALTH TIPS

ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ- ಯಾವುದೇ ತಾರತಮ್ಯವಿಲ್ಲದೆ ಹಿಂದೂ ಸಮಾಜವು ಒಂದುಗೂಡಬೇಕು- ಮಧುಸೂದನ ಆಯರ್ ಮಂಗಳೂರು

ಮುಳ್ಳೇರಿಯ: ದೇವಸ್ಥಾನಗಳು ಧಾರ್ಮಿಕ ಚಿಂತನೆಯ ಕೇಂದ್ರಗಳು. ಇಲ್ಲಿ ಯಾವುದೇ ತಾರಮ್ಯವಿಲ್ಲದೆ ಹಿಂದೂಸಮಾಜವು ಒಂದುಗೂಡಬೇಕು. ಬ್ರಹ್ಮಕಲಶದ ಮೂಲಕ  ಹಿಂದೂ ಸಮಾಜದ ಉದ್ಧಾರವಾಗಬೇಕು ಎಂದು ಕೊಲ್ಯ ಶ್ರೀ ಮುಕಾಂಬಿಕಾ ದೇವಸ್ಥಾನದ ಅಧ್ಯಕ್ಷ ಮಧುಸೂದನ ಆಯರ್ ಮಂಗಳೂರು ಅಭಿಪ್ರಾಯಪಟ್ಟರು.

ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ಶ್ರೀ ದೇವಸ್ಥಾನದ ಸಭಾ ಭವನದಲ್ಲಿ ಭಾನುವಾರ ಜರಗಿದ ಕಾರ್ಯಕ್ರಮದಲ್ಲಿ ಬ್ರಹ್ಮಕಲಶಾಭಿಷೇಕ ಸಮಿತಿಯ ಅಧ್ಯಕ್ಷ ನಿತ್ಯಾನಂದ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರವನ್ನು ಕೋರಿ ನಾಡಿನ ಪ್ರತೀ ಮನೆಗೂ ಆಮಂತ್ರಣ ಪತ್ರಿಕೆಯನ್ನು ವಿತರಿಸಿ ಅವರನ್ನು ಪಾಲ್ಗೊಳ್ಳುವಂತೆ ಮಾಡಲು ಕಾರ್ಯಕರ್ತರಲ್ಲಿ ಕರೆಯಿತ್ತರು.

ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಘುನಾಥ ಪೈ ಕುಂಬಳೆ, ಮಧೂರು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್ ಕಾಸರಗೋಡು, ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದ ಆಡಳಿತ ಮಂಡಳಿ ನಿಕಟಪೂರ್ವ ಚೆಯರ್‍ಮೇನ್ ನಾರಾಯಣನ್ ಕಾಟುಕುಕ್ಕೆ, ಮಂಗಲ್ಪಾಡಿ ಬಂಟರ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಯಾಮ್ನಿ ಎಸ್ಟೇಟ್ ಮುಟ್ಟಂ, ಶಿವಶಂಕರ ನೆಕ್ರಾಜೆ, ನಿವೃತ್ತ ಅರಣ್ಯಾಧಿಕಾರಿ ಪಿ.ಯಂ.ಕೆ. ಕಬಕ, ಪವಿತ್ರಪಾಣಿ ಕಿರಣ್ ಕುಮಾರ್ ಕುಣಿಕುಳ್ಳಾಯ ಉಬ್ರಂಗಳ, ನಾರಂಪಾಡಿ ಗುತ್ತು ಬಾಲಕೃಷ್ಣ ರೈ, ಅರ್ಚಕ ಶಂಕರನಾರಾಯಣ ಕೆದಿಲ್ಲಾಯ, ಸೇವಾಸಮಿತಿ ಉಪಾಧ್ಯಕ್ಷ ಕುಂಞÂರಾಮ ಗೋಸಾಡ, ಹರಿನಾರಾಯಣ ಶಿರಂತಡ್ಕ, ವೆಂಕಟ್ರಮಣ ಭಟ್ಟ ನಾರಂಪಾಡಿ, ಗಂಗಾಧರ ತೆಕ್ಕೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾಸಮಿತಿಯ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಬ್ರಹ್ಮಕಲಶಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ವಂದಿಸಿದರು. ಕಾರ್ಯದರ್ಶಿ ಕೃಷ್ಣಮೂರ್ತಿ ಎಡಪ್ಪಾಡಿ ನಿರೂಪಿಸಿದರು. 

2025 ಫೆಬ್ರವರಿ 2ರಿಂದ 10ರ ತನಕ ಬ್ರಹ್ಮಕಲಶಾಭಿಷೇಕ ಹಾಗೂ ವರ್ಷಾವಧಿ ಉತ್ಸವವು ಫೆ.11ರಿಂದ 16ರ ತನಕ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಜರಗಲಿರುವುದು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries