HEALTH TIPS

ವಿಮಾನ ನಿಲ್ದಾಣಗಳಂತೆ ಮೇಲ್ದರ್ಜೆಗೆ ರೈಲ್ವೇ ನಿಲ್ದಾಣಗಳು

ಕೋಝಿಕ್ಕೋಡ್: ರೈಲ್ವೇ ವಲಯದಲ್ಲಿ ಅಭೂತಪೂರ್ವ ಪ್ರಗತಿಯ ಭಾಗವಾಗಿ ಕೇರಳದ 35 ರೈಲು ನಿಲ್ದಾಣಗಳ ಚಹರೆಯೇ ಬದಲಾಗುತ್ತಿದೆ.

ವಿಮಾನ ನಿಲ್ದಾಣದ ಸೌಲಭ್ಯಗಳೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ನಿಲ್ದಾಣಗಳು ಕೇರಳದಲ್ಲಿ ರೈಲು ಪ್ರಯಾಣಿಕರ ಸ್ಥಾನಮಾನವನ್ನು ಹೆಚ್ಚಿಸಲಿವೆ. ಅಮೃತ್ ಭಾರತ್ ಯೋಜನೆಯಡಿ ರಾಜ್ಯದ 35 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಪ್ರತಿ ಪ್ರದೇಶದ ಇತಿಹಾಸ, ಸಂಪ್ರದಾಯ ಮತ್ತು ಸಂಸ್ಕøತಿಯನ್ನು ಪ್ರತಿಬಿಂಬಿಸುವ ನಿಲ್ದಾಣಗಳನ್ನು ವಿನ್ಯಾಸಗೊಳಿಸಲಾಗಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜನ್ಮಭೂಮಿ ಸುವರ್ಣ ಜಯಂತಿ ಉದ್ಘಾಟನಾ ಕಾರ್ಯಕ್ರಮದಲ್ಲಿ 3000 ಕೋಟಿ ವೆಚ್ಚದಲ್ಲಿ ರಾಜ್ಯದ ಸೌಂದರ್ಯ ಮತ್ತು ಅನುಕೂಲಕ್ಕಾಗಿ ಸುಧಾರಿಸುವ ನಿಲ್ದಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ತಿರುವನಂತಪುರಂ (496 ಕೋಟಿ), ಕೋಝಿಕ್ಕೋಡ್ (473 ಕೋಟಿ), ಎರ್ನಾಕುಳಂ ಸೌತ್ (445 ಕೋಟಿ), ತ್ರಿಶೂರ್ (394 ಕೋಟಿ) ಮತ್ತು ಕೊಲ್ಲಂ (384 ಕೋಟಿ) ನಿಲ್ದಾಣಗಳಲ್ಲಿ ಅತ್ಯಂತ ದುಬಾರಿ ನವೀಕರಣ ಕಾಮಗಾರಿಗಳು ನಡೆಯುತ್ತಿವೆ. ಎರ್ನಾಕುಳಂ ಉತ್ತರ ನಿಲ್ದಾಣವನ್ನು 226 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ವರ್ಕಲ ಶಿವಗಿರಿ ನಿಲ್ದಾಣವನ್ನು ಆಧುನೀಕರಿಸಲು 133 ಕೋಟಿ ರೂ.ವಿನಿಯೋಗಿಸಲಾಗುವುದು.

ಅಂಗಡಿಪುರಂ (26 ಕೋಟಿ ರೂ.), ಅಂಗಮಾಲಿ (15), ಆಲಪ್ಪುಳ (14), ಚಾಲಕುಡಿ (48), ಚಂಗನಶ್ಶೇರಿ (6), ಚಿರಾಯಂಕೀಜ್ (5), ಚೆಂಗನ್ನೂರ್ (10), ಎಟುಮನೂರು (5), ಗುರುವಾಯೂರ್ (9), ಕಣ್ಣೂರು ( 15), ಕೋಝಿಕ್ಕೋಡ್ (25), ಕಾಯಂಕುಳಂ (16), ಕುಟ್ಟಿಪುರಂ (6), ಫರೂಕ್ (6), ಮಾವೇಲಿಕ್ಕರ (6), ನಿಲಂಬೂರ್ (8), ನೆಯದ್ಯಾಟಿಂಗರ (6), ಒಟ್ಟಪಾಲಂ (11), ಪರಪನಂಗಡಿ (10), ಪಯ್ಯನ್ನೂರ್ ( 29), ಪುನಲೂರ್ (5), ಶೋರ್ನೂರು (21), ತಲಶ್ಶೇರಿ (10), ತಿರೂರ್ (18), ತಿರುವಲ್ಲಾ (14), ತ್ರಿಪುಣಿತುರಾ (5), ವಡಕರ (23) ಮತ್ತು ವಡಕ್ಕಂಚೇರಿ (ರೂ. 6 ಕೋಟಿ) ಯಂತೆ ಮೇಲ್ದರ್ಜೆಗೇರಿಸಲಾಗುವುದು. 

ಎರಡನೇ ಹಂತದಲ್ಲಿ ಆಲುವಾ, ಕಜಕೂಟಂ, ವೈಕಂ ರಸ್ತೆ ಸೇರಿದಂತೆ 30 ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಮೇಲ್ದರ್ಜೆಗೇರಿಸಲಾಗುವುದು ಎಂದು ರೈಲ್ವೆ ಮೂಲಗಳು  ತಿಳಿಸಿವೆ. ಡಿಸೆಂಬರ್‍ನಲ್ಲಿ ಈ ಕುರಿತು ಘೋಷಣೆ ಮಾಡಲಾಗುವುದು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries