ಮಧೂರು: ಉಳಿಯ ಧನ್ವ0ತರೀ ಸನ್ನಿಧಿಯಲ್ಲಿ ಧನ್ವ0ತರೀ ಜಯಂತಿ ಆಚರಣೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಇವರ ಮುದಾಳತ್ವದಲ್ಲಿ ಮಂಗಳವಾರ ನಡೆಯಿತು.
ಬೆಳಗ್ಗೆ ಗಣಪತಿ ಹವನ, ಧನ್ವ0ತರೀ ಹವನ, ದೇವರಿಗೆ ಪವಮಾನ ಅಭಿಷೇಕ ಹಾಗೂ ದೇವರಿಗೆ ವಿಶೇಷ ಪೂಜೆ ಜರಗಿತು. ಕಾಸರಗೋಡು ಪದ್ಮಪ್ರಿಯಾ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆ ಹಾಗೂ ಜಿಲ್ಲೆಯ ಮೇರು ಕಲಾವಿಧರ ಕೂಡುವಿಕೆಯಿಂದ "ಭೃಗು ಶಾಪ" ತಾಳಮದ್ದಳೆ ಕೂಟ ನಡೆಯಿತು.
ಅಪರಾಹ್ನ 2 ರಿಂದ ಉಳಿಯ ದನ್ವ0ತರೀ ಯಕ್ಷಗಾನ ಸಂಘದ ಸದಸ್ಯರಿಂದ "ಮಾನಿಷಾದ" ಯಕ್ಷಗಾನ ತಾಳಮದ್ದಳೆ ಜರಗಿತು. ಸಂಜೆ ಎಡನೀರು ಮಠಾಧೀಶÀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಆಗಮಿಸಿ ಆಶೀರ್ವದಿಸಿದರು. ರಾತ್ರಿ ಶ್ರೀದೇವರಿಗೆ ವಿಶೇಷ ಕಾರ್ತೀಕ ಪೂಜೆಯಿಂದ ಕಾರ್ಯಕ್ರಮ ಸಂಪನ್ನಗೊಂಡಿತು.