HEALTH TIPS

ವಲಸೆ ನೀತಿ; ಸರ್ಕಾರಿಂದ ತಪ್ಪಾಗಿದೆ ಎಂದ ಕೆನಡಾ ಪ್ರಧಾನಿ‌

         ಟ್ಟಾವಾ: 'ವಲಸೆ ನೀತಿ ವಿಚಾರದಲ್ಲಿ ಸರ್ಕಾರದಿಂದ ತಪ್ಪು ನಡೆದಿದೆ' ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

         ಕೆಲವೊಂದು ನಕಲಿ ಕಾಲೇಜುಗಳು, ಬೃಹತ್‌ ಉದ್ಯಮ ಸಂಸ್ಥೆಗಳು ತಮ್ಮ ಸ್ವಹಿತಾಸಕ್ತಿಗಾಗಿ ವಲಸೆ ನೀತಿ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡವು ಎಂದು ತಿಳಿಸಿದ್ದಾರೆ.

          2025ರಲ್ಲಿ ಕೆನಡಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಟ್ರುಡೊ ನೇತೃತ್ವದ ಲಿಬರಲ್‌ ಪಕ್ಷವು ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಪ್ರಧಾನಿ ಆಡಳಿತದ ಕಾರ್ಯವೈಖರಿ ವಿರುದ್ಧವೂ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ವಸತಿ ಸಮಸ್ಯೆ, ಹಣದುಬ್ಬರ, ಆರೋಗ್ಯ ಹಾಗೂ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಜನರ ಅಗತ್ಯಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ವಿರೋಧ ಪಕ್ಷಗಳು ಮುಗಿಬಿದ್ದಿವೆ.


          'ಕಳೆದ ಎರಡು ವರ್ಷಗಳಲ್ಲಿ ಕೆನಡಾದಲ್ಲಿ ಜನಸಂಖ್ಯೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಮಧ್ಯೆಯೇ ನಕಲಿ ಕಾಲೇಜುಗಳು, ಉದ್ಯಮ ಸಂಸ್ಥೆಗಳು ವಲಸೆ ನೀತಿಯನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡವು' ಎಂದು ತನ್ನ ಯೂಟ್ಯೂಬ್‌ ಚಾನಲ್‌ನಲ್ಲಿ ಈ ವಿಷಯ ತಿಳಿಸಿದ್ದಾರೆ.

 ‌           'ಮುಂದಿನ ಮೂರು ವರ್ಷಗಳಲ್ಲಿ ದೇಶಕ್ಕೆ ವಲಸೆ ಬರುವವರ ಸಂಖ್ಯೆಗೆ ಕಡಿತ ಮಾಡಲಾಗುವುದು' ಎಂದು ಈ ವೇಳೆ ಭರವಸೆ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries