ಬದಿಯಡ್ಕ: ದೇವಾಲಯಗಳು ದೈವಸ್ಥಾನಗಳು ಹಾಗೂ ಮಠ ಮಂದಿರಗಳು ಎಲ್ಲಾ ಆ ಪ್ರದೇಶದ ಚೈತನ್ಯದಾಯಕ ಆಧ್ಯಾತ್ಮಿಕ ಬಿಂದುಗಳಾಗಿವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸುತ್ತಾ ಬಂದರೇ ಆ ಪ್ರದೇಶದ ಸುಭಿಕ್ಷೆ ನೆಲೆ ನಿಲ್ಲುತ್ತದೆ ಎಂದು ಮಜಿರ್ಪಳ್ಳಕಟ್ಟೆ ಶ್ರೀ ಅಯ್ಯಪ್ಪ ಸೇವಾಸಮಿತಿಯ ಅಧ್ಯಕ್ಷ ಸುಧಾಕರ ಮಜಿರ್ಪಳ್ಳಕಟ್ಟೆ ಅಭಿಪ್ರಾಯಪಟ್ಟಿದ್ದಾರೆ.
ಮಜಿರ್ಪಳ್ಳಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ 34ನೇ ವಾರ್ಷಿಕ ಭಜನೋತ್ಸವದ ಪೂರ್ವಭಾವಿಯಾಗಿ ಜರಗಿದ ಸೇವಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಡಿಸಂಬರ್ 21ರಂದು ಶ್ರೀ ಮಂದಿರದ ವಾರ್ಷಿಕ ಭಜನೋತ್ಸವ ಜರಗಲಿದ್ದು ಅದರ ಪೂರ್ವಭಾವಿಯಾಗಿ ನಡೆಯುತ್ತಿರುವ ಶೌಚಾಲಯದ ಕಾಮಗಾರಿ, ಸಂಗ್ರಹದ ಕುರಿತಾಗಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಭಜನೋತ್ಸವದ ಆಮಂತ್ರಣ ಪತ್ರಿಕೆ, ಲಕ್ಕಿ ಕೂಪನ್ ಗಳನ್ನು ಬಿಡುಗಡೆಗೊಳಿಸಲಾಯಿತು. ಮಂದಿರದ ಸ್ಥಾಪಕ ಸದಸ್ಯರಾದ ಐತ್ತಪ್ಪ ಕುಲಾಲ್ ಬೇರ್ಯ, ಲೋಕೇಶ್ ಯು. ಮುಂಡಾನ್‍ತ್ತಡ್ಕ, ರಾಘವ ಮಜಿರ್ಪಳ್ಳಕಟ್ಟೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಅಯ್ಯಪ್ಪ ಮಹಿಳಾ ಸಂಘ, ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಉದಯ ಎಂ ಮರಕ್ಕಾಡ್ ಸ್ವಾಗತಿಸಿ, ಶರತ್ ಶಾಸ್ತಾನಗರ ವಂದಿಸಿದರು.