ಕಾಸರಗೋಡು: 'ಕುರುವ' ಗ್ಯಾಂಗ್ ಬಳಿಕ 'ತಿರುಡರ್' ಗ್ಯಾಂಗ್ ಕೂಡ ರಾಜ್ಯಕ್ಕೆ ಆಗಮಿಸಿದೆ ಎಂಬ ಸಂಶಯ ಬಲವಾಗಿದೆ. ಎರಡೇ ದಿನಗಳಲ್ಲಿ ಕಾಸರಗೋಡು ಮತ್ತು ಮಂಜೇಶ್ವರ ಪ್ರದೇಶ ಕೇಂದ್ರೀಕರಿಸಿ ಆರು ದೇವಾಲಯಗಳಲ್ಲಿ ದರೋಡೆ, ದರೋಡೆ ಯತ್ನ ನಡೆದಿದೆ.
ತಿರುಡರ್ ಸಂಗಮ್ ಎಂಬುದು ದರೋಡೆ ತಂಡವಾಗಿದ್ದು ಅದು ಪೂಜಾ ಸ್ಥಳಗಳನ್ನು ಕೇಂದ್ರೀಕರಿಸಿ ಕೃತ್ಯವೆಸಗುತ್ತದೆ.
ಸ್ಥಳೀಯ ಕೇಂದ್ರಗಳಲ್ಲಿ ವ್ಯಾಪಕ ಕಳ್ಳತನಗಳು ನಡೆಯುತ್ತಿವೆ. ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ನಡೆದ ದರೋಡೆಗಳು ಇದೇ ಸ್ವರೂಪದಲ್ಲಿವೆ. ಇದೇ ತಿರುಡರ್ ಸಂಘ ಎಂಬ ತೀರ್ಮಾನಕ್ಕೆ ಬರಲು ಕಾರಣ. ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಭಾನುವಾರ ಎಡನೀರಿನ ವಿಷ್ಣುಮಂಗಲ ದೇವಸ್ಥಾನದ ಭಂಡಾರವನ್ನು ಕೆಡವಿ ಹಣ ದೋಚಲಾಗಿತ್ತು. ಸೋಮವಾರವೂ ಅದೇ ಪ್ರದೇಶದ ಪ್ರಾರ್ಥನಾ ಸ್ಥಳಗಳನ್ನು ಕೇಂದ್ರವಾಗಿಟ್ಟುಕೊಂಡು(ಮಾನ್ಯ) ಕಳ್ಳತನ ನಡೆದಿತ್ತು. ಮಂಜೇಶ್ವರ ವರ್ಕಾಡಿ ಕೋಳ್ಯೂರು ದೇವಸ್ಥಾನ(ತಿಂಗಳ ಹಿಂಣದೆ),ಪಾವಳ ಚರ್ಚ್‍ನ ಪ್ರಾರ್ಥನಾ ಮಂದಿರದಲ್ಲಿದ್ದ ಕಾಣಿಕೆ ಹುಂಡಿ ಮುರಿದು ಕಳವು ನಡೆದಿತ್ತು. ಇಲ್ಲಿನ ಕೊರಗಜ್ಜ ದೇವರ ಭಂಡಾರವನ್ನೂ ಕೆಡವಲಾಗಿತ್ತು. ಕ್ಷೇತ್ರದ ಸಿಸಿ ಟಿ.ವಿ. ದೃಶ್ಯಾವಳಿಗಳನ್ನು ಪೋಲೀಸರು ಪರಿಶೀಲಿಸುತ್ತಿದ್ದಾರೆ. ಆದರೆ, ಹಲವೆಡೆ ಸಿಸಿಟಿವಿ ಇಲ್ಲದಿರುವುದು ತನಿಖೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.