ಕಾಸರಗೋಡು: 71ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಕಾಸರಗೋಡು ಸರ್ಕಲ್ ಕೋ-ಆಪರೇಟಿವ್ ಯೂನಿಯನ್ ನೇತೃತ್ವದಲ್ಲಿ ಸಹಕಾರಿ ಸಭೆ ಹಾಗೂ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಕಾಸರಗೋಡು ಕೇರಳ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.
ಕೇರಳಬ್ಯಾಂಕ್ ನಿರ್ದೇಶಕ ಸಾಬು ಅಬ್ರಹಾಂ ಸಮಾರಂಭ ಉದ್ಘಾಟಿಸಿದರು. ಸಹಕಾರಿ ಕಾಯ್ದೆಯ ತಿದ್ದುಪಡಿಯ ಮೂಲಕ ಸಹಕಾರ ಚಳುವಳಿಯನ್ನು ಬಲಪಡಿಸುವ ವಿಷಯದ ಕುರಿತು ಆಯೋಜಿಸಲಾದ ವಿಚಾರ ಸಂಕಿರಣದಲ್ಲಿ ಐಸಿಎಂ ಕಣ್ಣೂರು ಅಧ್ಯಾಪಕ ಸದಸ್ಯ ಸಿ.ವಿ.ವಿನೋದ್ ಕುಮಾರ್ ಅವರು ತರಗತಿ ನಡೆಸಿದರು. ಸಂಘಟನಾ ಸಮಿತಿ ಅಧ್ಯಕ್ಷ ಎಸ್.ಜೆ.ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಜಂಟಿ ರಿಜಿಸ್ಟ್ರಾರ್ ಲಸಿತಾ ಕೆ, ಜಂಟಿ ನಿರ್ದೇಶಕಿ ಎ.ರಮಾ, ಜಂಟಿ ನಿರ್ದೇಶಕಿ ಸುಜಾತಾ, ಉಪನೋಂದಣಾಧಿಕಾರಿ ವಿ.ಚಂದ್ರನ್, ಕೆ.ವಿ. ಕುಞÂರಾಮನ್, ಕರುಣಾಕರನ್ ನಂಬಿಯಾರ್, ಕೆ.ಮುರಳೀಧರನ್, ವಿ.ಎಸ್.ಸುಬ್ರಮಣ್ಯ ಕಡಂಬಳಿತ್ತಾಯ, ವಿ.ಆರ್.ವಿದ್ಯಾಸಾಗರ್, ಹಾಶಿಂ.ಬಂಬ್ರಾಣಿ, ಪಿ ಸವಿತಾ, ಪಿ ಕೆ ಬಾಲಕೃಷ್ಣನ್, ಪಿ ಲೋಹಿತಾಕ್ಷನ್, ಮನೋಜ್ ಕುಮಾರ್ ಕೆ ವಿ, ಶಾಂತಾರಾಮ ಶೆಟ್ಟಿ, ರಾಮಚಂದ್ರ, ಕೆ ಪಿ ವಿಶ್ವನಾಥನ್, ಬಿ ಸುಕುಮಾರನ್ ಮತ್ತು ಬಿ ಬಾಬುರಾಜ್ ಉಪಸ್ಥಿತರಿದ್ದರು. ವೃತ್ತ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಆರ್.ಜಯಾನಂದ ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ ಲತಾ ಟಿ.ಎಂ.ವಂದಿಸಿದರು.