ಮುಳ್ಳೇರಿಯ: ಯೇನಪೋಯ ವಿದ್ಯಾಸಂಸ್ಥೆ ದೇರಳಕಟ್ಟೆ ಮಂಗಳೂರು ಇದರ ಎಮ್. ಎಸ್ ಡಬ್ಲ್ಯೊ ವಿದ್ಯಾರ್ಥಿಗಳಿಂದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ಇತ್ತೀಚೆಗೆ ರೂರಲ್ ಕ್ಯಾಂಪ್ ಪ್ರಾರಂಭಿಸಿತು.
ಸ್ಥಳ ಸಾನ್ನಿದ್ಯ ಶ್ರೀ ಗೋಪಾಲಕೃಷ್ಣ ದೇವರ ಪೂಜಾರ್ಚನೆಯೊಂದಿಗೆ ಕಲಾ ಸಂಘದ ಅಧ್ಯಕ್ಷರು, ಖ್ಯಾತ ವೈದ್ಯ, ಸಾಹಿತಿ, ಡಾ. ರಮಾನಂದ ಬನಾರಿ ಮಂಜೇಶ್ವರ ಅವರು ಶಿಬಿರದ ಉದ್ಘಾಟಿಸಿದರು. ದುಶ್ಚಟಗಳಿಂದ ದೂರವಿರುವಂತೆ ಮನೆ ಮನೆಗೆ ಸಾರಿ ಹೇಳುವ ಇಂತಹ ಗ್ರಾಮೀಣ ವಾಸ್ತವ್ಯ ಶಿಬಿರ ಅತ್ಯಂತ ಉಪಯುಕ್ತ ಎಂಬುದನ್ನು ಒತ್ತಿ ಹೇಳುತ್ತ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ಮೂವತ್ತಮೂರು ವಿದ್ಯಾರ್ಥಿಗಳನ್ನೊಳಗೊಂಡ ಈ ಶಿಬಿರದ ಪ್ರಮುಖ ಮೇಲ್ವಿಚಾರಕ ಡಾ.ಮಹಮ್ಮದ್ ಗುತ್ತಿಗಾರು ಹಾಗೂ ಮತ್ತಿತರ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು. ಡಾ. ಮಹಮ್ಮದ್ ಅವರು " ಗ್ರಾಮೀಣ ಪ್ರದೇಶದಲ್ಲಿ ಕಲಾ ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ತೊಡಗಿರುವ ಈ ಕೇಂದ್ರದ ಕಾರ್ಯ ಸ್ತುತ್ಯರ್ಹ ಎಂದು ತಿಳಿಸಿ ್ತ ಸಹಕಾರಕ್ಕಾಗಿ ಕೃತಜ್ಞತೆ ಸೂಚಿಸಿದರು.
ಮೊದಲ ದಿನ ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆ ರೂಪದಲ್ಲಿ ಸಂಘದ ಮಹಿಳಾ ಸದಸ್ಯೆಯರಿಂದ ಯಕ್ಷಗಾನ ಬೀಷ್ಮಾರ್ಜುನ ಪ್ರಸಂಗದ ಆಯ್ದ ಭಾಗಗಳನ್ನು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತು.
ಎರಡನೇ ದಿನ ಯೇನಪೋಯ ಮೆಡಿಕಲ್ ಕಾಲೇಜಿನ ನುರಿತ ವೈದ್ಯ ಸಮೂಹದಿಂದ ನಡೆಸಿಕೊಟ್ಟ ಉಚಿತ ವೈದ್ಯಕೀಯ ಶಿಬಿರವು ಗ್ರಾಮೀಣ ಪ್ರದೇಶದ ಜನರ ಅರೋಗ್ಯ ಬಲವರ್ದನೆಗೆ ಪೂರಕವಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರುಗಳಾದ ನಳಿನಾಕ್ಷಿ ಹಾಗೂ ತಾಹಿರ ಸಹಕರಿಸಿದರು.
ಮೂರನೇ ದಿನ ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಕಲಾ ಸಂಘದ ಕಾರ್ಯದರ್ಶಿ ವಿಶ್ವ ವಿನೋದ ಬನಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು.