ಬದಿಯಡ್ಕ: ಶಾಲಾ ಮಕ್ಕಳಿಗೆ ಟ್ಯೂಷನ್ ಸೇರಿದಂತೆ ಪಠ್ಯೇತರ ಚಟುವಟಿಕೆಯ ಕಲಿಕೆಯ ಅನುಕೂಲಕ್ಕಾಗಿ ಹಾಗೂ ಸಂಗೀತ, ಯಕ್ಷಗಾನ, ಯೋಗ ಮೊದಲಾದವುಗಳ ಬಗ್ಗೆ ನುರಿತ ಅಧ್ಯಾಪಕರಿಂದ ತರಬೇತಿ ನೀಡುವ ಎಜುಸೋನ್ ಎಂಬ ನೂತನ ಶೈಕ್ಷಣಿಕ ಸಂಸ್ಥೆಯು ಕಾರ್ಯಾರಂಭಗೊಂಡಿದೆ. ಸಾರ್ವಜನಿಕರೂ ಇದರ ಪ್ರಯೋಜನವನ್ನು ಪಡೆದುಕೊಳ್ಳ ಬಹುದಾಗಿದೆ.
ಬದಿಯಡ್ಕ ಮೇಲಿನ ಪೇಟೆಯ ನವಜೀವನ ಕಾಂಪ್ಲೆಕ್ಸ್ ನ ಕಟ್ಟಡದಲ್ಲಿ ಆರಂಭಗೊಂಡ ಈ ಸಂಸ್ಥೆಯನ್ನು ಕಾಸರಗೋಡು ಕೋ ಆಪ್ ಟೌನ್ ಬ್ಯಾಂಕಿನ ಬದಿಯಡ್ಕ ಶಾಖಾ ಪ್ರಬಂಧಕಿ ವಸಂತಿ ಕಾಸರಗೋಡು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ಮಾಲಕÀ ದಿನೇಶ್ ಬೊಳುಂಬು ಅಧ್ಯಕ್ಷತೆ ವಹಿಸಿ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಲೈಫ್ ಕೇರ್ ಲ್ಯಾಬ್ ಮಾಲಕ ಶ್ರೀಶರಾಜ ಶುಭ ಹಾರೈಸಿದರು. ಇದೇ ವೇಳೆ ಸಂಜಯ್ ಸತೀಶ್ ಅವರು ಭಕ್ತಿಗೀತೆಯನ್ನು ಹಾಡಿದರು. ಟೌನ್ ಬ್ಯಾಂಕಿನ ಸಿಬ್ಬಂದಿ ಕೃಷ್ಣ ಪ್ರಸಾದ್ ಬಾಂಜತ್ತಡ್ಕ, ಪ್ರಜ್ಞಾ, ಚಿತ್ರಲೇಖ ಉಪಸ್ಥಿತರಿದ್ದರು. ವರ್ಷಾ ಟೀಚರ್ ಸೂರಂಬೈಲು ಪ್ರಾರ್ಥನೆ ಹಾಡಿದರು. ಅಭಿಜ್ಞಾ ಸ್ವಾಗತಿಸಿ, ನಿರೂಪಿಸಿದರು. ಸೌಮ್ಯಾ ಟೀಚರ್ ವಂದಿಸಿದರು.