ಕಾಸರಗೋಡು: ಸಿಪಿಎಂ ಏರಿಯಾ ಸಮ್ಮೇಳನಕ್ಕಾಗಿ ನಗರಠಾಣೆ ವ್ಯಾಪ್ತಿಯ ಕೂಡ್ಲುವಿನಲ್ಲಿ ಸಿದ್ಧಪಡಿಸಿ ಇರಿಸಲಾಗಿದ್ದ ಧ್ವಜಸ್ತಂಬವನ್ನು ಕಳವುಗೈಯಲಾಗಿದೆ. ಸೋಮವಾರ ನಸುಕಿಗೆ ಕಳವು ನಡೆದಿರುವ ಬಗ್ಗೆ ಸಿಪಿಎಂ ಏರಿಯಾ ಕಾರ್ಯದರ್ಶಿ ಕೆ.ಎ ಮಹಮ್ಮದ್ ಹನೀಫ್ ನಗರಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಡಿವೈಎಸ್ಪಿ ಸಿ.ಕೆ ಸುನಿಲ್ ಕುಮಾರ್, ಇನ್ಸ್ಪೆಕ್ಟರ್ ಪಿ. ನಳಿನಾಕ್ಷನ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ತನಿಖೆ ನಡೆಸಿದರು. ಶ್ವಾನದಳ, ಬೆರಳಚ್ಚು ಸಿಬ್ಬಂದಿ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದರು.