ಐಸಿಸಿಯ ಈ ಕ್ರಮವು ನೆತನ್ಯಾಹು ಅವರ ಸಂಚಾರಕ್ಕೆ ನಿರ್ಬಂಧ ವಿಧಿಸುತ್ತದೆ.
ನ್ಯಾಯಾಲಯದ 124 ಸದಸ್ಯ ರಾಷ್ಟ್ರಗಳು ತಮ್ಮ ವ್ಯಾಪ್ತಿಯಲ್ಲಿ ಅವರನ್ನು ಬಂಧಿಸಬಹುದಾಗಿದೆ.
ಮಾನವೀಯತೆಯ ವಿರುದ್ಧದ ಅಪರಾಧ ಮತ್ತು 2023ರ ಅಕ್ಟೋಬರ್ 8ರಿಂದ ಅವರು ನಡೆಸಿರುವ ಯುದ್ಧಾಪರಾಧಗಳಿಗಾಗಿ ನೆತನ್ಯಾಹು ಮತ್ತು ಗ್ಯಾಲಂಟ್ ಅವರನ್ನು ಬಂಧಿಸಲು ವಾರಂಟ್ ಜಾರಿಗೊಳಿಸಲಾಗಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ. ಡೀಫ್ ವಿರುದ್ಧವೂ ಐಸಿಸಿ ವಾರಂಟ್ ಜಾರಿ ಮಾಡಿದೆ.
ದಕ್ಷಿಣ ಗಾಜಾದಲ್ಲಿ ಜುಲೈನಲ್ಲಿ ತಾನು ನಡೆಸಿದ ವೈಮಾನಿಕ ದಾಳಿಯಲ್ಲಿ ಡೀಫ್ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಆಗಸ್ಟ್‌ನಲ್ಲಿ ಹೇಳಿತ್ತು. ಆದರೆ ಹಮಾಸ್ ಅದನ್ನು ನಿರಾಕರಿಸಿತ್ತು.