ನವದೆಹಲಿ: ಕಾಗದ ರಹಿತ ಉಪಕ್ರಮದ ಭಾಗವಾಗಿ ನಿನ್ನೆಯಿಂದ ಆರಂಭಗೊಳ್ಳುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸದಸ್ಯರು ಎಲೆಕ್ಟ್ರಾನಿಕ್ ಟ್ಯಾಬ್‌ಲ್ಲಿ ಡಿಜಿಟಲ್ ಪೆನ್ ಮೂಲಕ ಹಾಜರಾತಿಯನ್ನು ಹಾಕಲಿದ್ದಾರೆ ಎಂದು ಲೋಕಸಭಾ ಕಾರ್ಯದರ್ಶಿ ತಿಳಿಸಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಅವರ ಸಂಸತ್ತನ್ನು ಪೇಪರ್‌ಲೆಸ್ ಮಾಡುವ ಉಪಕ್ರಮದ ಭಾಗವಾಗಿ ಲೋಕಸಭೆಯ ಸಭಾಂಗಣದ ಲಾಬಿಯಲ್ಲಿ ನಾಲ್ಕು ಕೌಂಟರ್‌ಗಳಲ್ಲಿ ಎಲೆಕ್ಟ್ರಾನಿಕ್ ಟ್ಯಾಬ್‌ಗಳು ಇರಲಿದೆ ಎಂದೂ ಅವರು ತಿಳಿಸಿದ್ದಾರೆ.
ಹಾಜರಾತಿ ಪುಸ್ತಕವನ್ನೂ ಕೌಂಟರ್‌ನಲ್ಲಿ ಇಡಲಾಗುವುದು ಆದರೆ, ಟ್ಯಾಬ್ ಅನ್ನು ಸದಸ್ಯರು ಆದ್ಯತೆಯ ಆಯ್ಕೆಯಾಗಿ ಬಳಸುವಂತೆ ಸೂಚನೆ ನೀಡಲಾಗಿದೆ ಎಂದು ಲೋಕಸಭೆ ಸಚಿವಾಲಯ ಹೇಳಿದೆ.
ಸದಸ್ಯರು ಮೊದಲು ಟ್ಯಾಬ್‌ನಲ್ಲಿರುವ ಡ್ರಾಪ್ ಡೌನ್ ಮೆನುವಿನಿಂದ ತಮ್ಮ ಹೆಸರನ್ನು ಆಯ್ಕೆ ಮಾಡಬೇಕಾಗುತ್ತದೆ, ಡಿಜಿಟಲ್ ಪೆನ್ ಸಹಾಯದಿಂದ ತಮ್ಮ ಸಹಿಯನ್ನು ಹಾಕಿ, ತಮ್ಮ ಹಾಜರಾತಿಯನ್ನು ನೋಂದಾಯಿಸಲು 'ಸಲ್ಲಿಸು' ಬಟನ್ ಒತ್ತಬೇಕು. ತಾಂತ್ರಿಕವಾಗಿ ಸಹಾಯ ಮಾಡಲು ಪ್ರತಿ ಕೌಂಟರ್‌ನಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರದ ಎಂಜಿನಿಯರ್‌ಗಳ ತಂಡ ನಿಯೋಜಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.