HEALTH TIPS

ಜಿರೀಬಾಮ್‌: ಇಬ್ಬರು 'ಮೈತೇಯಿ' ವೃದ್ಧರ ಶವ ಪತ್ತೆ

 ಇಂಫಾಲ್‌: ಸಂಘರ್ಷಪೀಡಿತ ಮಣಿಪುರದ ಜಿರೀಬಾಮ್ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಸುಟ್ಟಿರುವ ಸ್ಥಿತಿಯಲ್ಲಿ ಮೈತೇಯಿ ಸಮುದಾಯದ ಇಬ್ಬರು ವೃದ್ಧರ ಶವಗಳು ಪತ್ತೆಯಾಗಿವೆ. ಇದೇ ಸ್ಥಳದಲ್ಲಿ ಒಂದು ದಿನದ ಹಿಂದೆ ಶಂಕಿತ ಹಮರ್‌ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಜಿರೀಬಾಮ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ನಾಪತ್ತೆಯಾಗಿರುವ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರಿದಿದೆ ಎಂದು ಐಜಿಪಿ (ಕಾರ್ಯಾಚರಣೆ) ಐ.ಕೆ. ಮುಹವ್‌ ಹೇಳಿದ್ದಾರೆ.

ಸೋಮವಾರ ಕುಕಿ ಜೋ ಸಮುದಾಯದ ಶಂಕಿತ ಉಗ್ರರು ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದ ಜಕುರಾಧೋರ್ ಕರೋಂಗ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ವೇಳೆ ಲೈಶ್ರಾಮ್ ಬಾಲೆನ್ ಮತ್ತು ಮೈಬಮ್ ಕೇಶೋ ಎಂಬ ವೃದ್ಧರ ಶವಗಳು ಪತ್ತೆಯಾಗಿವೆ ಎಂದು ಇನ್ನೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

'ಜಕುರಾಧೋರ್ ಕರೋಂಗ್ ಪ್ರದೇಶದಲ್ಲಿ ದಂಗೆಕೋರರು ಕೆಲವು ಅಂಗಡಿಗಳನ್ನು ಸುಟ್ಟುಹಾಕಿದ ನಂತರ ಮೈತೇಯಿ ಸಮುದಾಯದ ಇಬ್ಬರು ವೃದ್ಧರು ಮೃತಪಟ್ಟಿದ್ದಾರೆ' ಎಂದು ಅವರು ಹೇಳಿದರು.

ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿರೀಬಾಮ್ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಬೋರೊಬೆಕ್ರಾದಲ್ಲಿ ಸೋಮವಾರ ಗುಂಡಿನ ಚಕಮಕಿ ವೇಳೆ ಭದ್ರತಾ ಪಡೆಗಳು, ಶಂಕಿತ 11 ಮಂದಿ ಹಮರ್‌ ದಂಗೆಕೋರರನ್ನು ಹತ್ಯೆಗೈದಿರುವುದನ್ನು ವಿರೋಧಿಸಿ ಕುಕಿ ಜೊ ಸಮುದಾಯ ಹೆಚ್ಚಿರುವ ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆ 5 ಗಂಟೆಯಿಂದಲೇ ಬಂದ್ ಆಚರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.‌

ಜಿರೀಬಾಮ್‌ನಲ್ಲಿ ಕುಕಿ ಜೊ ಉಗ್ರರು ಅಪಹರಿಸಿರುವ ಶಂಕೆ ಇರುವ ಆರು ಮಂದಿಯ ಪತ್ತೆಗೆ ಒತ್ತಾಯಿಸಿ ಮೈತೇಯಿ ಸಮುದಾದವರು ಇಂಫಾಲ್ ಕಣಿವೆಯಲ್ಲಿ ಬುಧವಾರ ಸಾರ್ವತ್ರಿಕ ಬಂದ್‌ಗೆ ಕರೆ ನೀಡಿದ್ದಾರೆ.

ಜಿರೀಬಾಮ್‌ನಲ್ಲಿ ಪರಿಸ್ಥಿತಿ ಶಾಂತವಾಗಿದ್ದರೂ ಮಂಗಳವಾರ ಬೆಳಿಗ್ಗೆ ಉದ್ವಿಗ್ನ ಸ್ಥಿತಿ ಇತ್ತು. ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಗಸ್ತು ನಡೆಸಿದರು ಎಂದು ಅವರು ತಿಳಿಸಿದ್ದಾರೆ.

Cut-off box - ಪ್ರಮುಖಾಂಶಗಳು * ಕಳೆದ ವರ್ಷದ ಮೇ ತಿಂಗಳಿನಲ್ಲಿ ಮಣಿಪುರದಲ್ಲಿ ಮೈತೇಯಿ -ಕುಕಿ ಜೊ ಸಂಘರ್ಷ ಶುರು * ಈವರೆಗೆ ಸುಮಾರು 240 ಜನರು ಮೃತಪಟ್ಟಿದ್ದು 60000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ * ಸೇನೆ ಸಹಿತ ಹೆಚ್ಚಿನ ಭದ್ರತಾ ಪಡೆಗಳ ಉಪಸ್ಥಿತಿ ನಡುವೆಯೂ ಅಲ್ಲಲ್ಲಿ ಹಿಂಸಾಚಾರ ಮುಂದುವರಿದಿದೆ * ಹಮರ್‌ ಸಮುದಾಯದ 31 ವರ್ಷದ ಶಿಕ್ಷಕಿ ಮೇಲೆ ಶಂಕಿತ ಮೈತೇಯಿ ಬಂಡುಕೋರರು ಗುರುವಾರ ಅತ್ಯಾಚಾರ ನಡೆಸಿ ಸಜೀವ ದಹನ ಮಾಡಿದ್ದಾರೆ * ಈ ಘಟನೆ ನಂತರ ಇಂಫಾಲ್‌ ಕಣಿವೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದು ಉದ್ವಿಗ್ನ ಪರಿಸ್ಥಿತಿ ನೆಲಸಿದೆ

ಇಂಫಾಲ್‌ ಕಣಿವೆಯಲ್ಲಿ ಮತ್ತೆ ಹಿಂಸಾಚಾರ

ಜಿರೀಬಾಮ್ ಜಿಲ್ಲೆಯಲ್ಲಿನ ಘಟನೆಯ ನಂತರ ಇಂಫಾಲ್ ಕಣಿವೆಯ ಅನೇಕ ಸ್ಥಳಗಳಲ್ಲಿ ಮತ್ತೆ ಹಿಂಸಾಚಾರ ನಡೆದಿರುವುದು ಮಂಗಳವಾರ ವರದಿಯಾಗಿದೆ. ಎರಡು ಸಮುದಾಯಗಳ ಸಶಸ್ತ್ರ ಗುಂಪುಗಳು ಪರಸ್ಪರ ಗುಂಡಿನ ಚಕಮಕಿಯಲ್ಲಿ ತೊಡಗಿವೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಹಲವು ಸುಧಾರಿತ ಮಾರ್ಟರ್ ಶೆಲ್‌ಗಳನ್ನು ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆಗಳು ಬೆಳಿಗ್ಗೆ ವಶಪಡಿಸಿಕೊಂಡಿದ್ದಾರೆ. ಉಗ್ರರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ. ಪ್ರಕ್ಷುಬ್ಧಗೊಂಡಿರುವ ಪ್ರದೇಶಗಳಲ್ಲಿ ಅಸ್ಸಾಂ ರೈಫಲ್ಸ್ ಮತ್ತು ಸಿಆರ್‌ಪಿಎಫ್ ಒಳಗೊಂಡ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‌

ಸಿಆರ್‌ಪಿಎಫ್‌ಗೆ ಎಚ್ಚರಿಕೆ ನೀಡಿದ ಕೆಎಸ್‌ಒ

ಶಂಕಿತ 10 ಹಮರ್‌ ಉಗ್ರರ ಹತ್ಯೆ ಮಾಡಿರುವುದಕ್ಕೆ ಸಿಆರ್‌ಪಿಎಫ್‌ ವಿರುದ್ಧ ಕುಕಿ ಜೊ ಸಮುದಾಯಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು 'ಹಮರ್‌ ಯುವಕರನ್ನು ಕೊಂದಿದ್ದಕ್ಕಾಗಿ ಸಿಆರ್‌ಪಿಎಫ್ ಕ್ಷಮೆಯಾಚಿಸಬೇಕು' ಎಂದು ಕುಕಿ ವಿದ್ಯಾರ್ಥಿಗಳ ಸಂಘಟನೆಗಳು (ಕೆಎಸ್‌ಒ) ಮಂಗಳವಾರ ಒತ್ತಾಯಿಸಿವೆ. 'ಸಿಆರ್‌ಪಿಎಫ್ ಸಿಬ್ಬಂದಿ ತಮ್ಮ ಶಿಬಿರಗಳಿಂದ ಹೊರಗೆ ಕದಲಬಾರದು. ಈ ಸೂಚನೆಯನ್ನು ಸಿಆರ್‌ಪಿಎಫ್ ಯಾವುದೇ ಸಿಬ್ಬಂದಿ ಉಲ್ಲಂಘಿಸಿದರೆ ಅದರಿಂದ ಆಗುವ ಅಪಾಯಕ್ಕೆ ಅವರೇ ಹೊಣೆ' ಎಂದು ಎಚ್ಚರಿಕೆ ನೀಡಿ ಕೆಎಸ್‌ಒ ಹೇಳಿಕೆ ಬಿಡುಗಡೆ ಮಾಡಿದೆ. ಮೈತೇಯಿ ಸಮುದಾಯಗಳು ದಾಳಿಗೆ ಕೇಂದ್ರೀಯ ಪಡೆಗಳನ್ನು ಗುರಾಣಿಯಾಗಿ ಬಳಸುತ್ತಿದ್ದರೂ ಸಿಆರ್‌ಪಿಎಫ್‌ ಹಮರ್‌ ಯುವಕರ ಮೇಲೆ ದಾಳಿ ಮಾಡಿದ್ದು ಏಕೆ ಎಂದು ಕುಕಿ ಜೋ ಸಂಘಟನೆಗಳು ಪ್ರಶ್ನಿಸಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries