ಉಪ್ಪಳ: ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಯ ಮಂಜೇಶ್ವರ ತಾಲ್ಲೂಕು ಸಮಿತಿ ರೂಪಿಕರಣದ ಸಮಾಲೋಚನ ಸಭೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಜಿಯವರ ಆಶೀರ್ವಚನದೊಂದಿಗೆ ಇತ್ತೀಚೆಗೆ ನಡೆಯಿತು.
ಕುಳೂರು ಸದಾಶಿವ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಡಾ ಬಿ ಎಸ್ ರಾವ್, ಜಯದೇವ ಖಂಡಿಗೆ, ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಮಧುಸೂದನ ಆಯರ್ ರವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಮಂಜೇಶ್ವರ ತಾಲ್ಲೂಕು ಸಮಿತಿಯನ್ನು ರೂಪಿಕರಿಸಲಾಯಿತು ಡಾ ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಸ್ವಾಗತಿಸಿ, ವಂದಿಸಿದರು.