ಕಾಸರಗೋಡು:ಇಲ್ಲಿಯ ಬಿ ಇ ಎಂ ಶಾಲೆಯ ಎನ್‍ಸಿಸಿ ಯೂನಿಟ್ ವಿದ್ಯಾರ್ಥಿಗಳು ಪುನೀತ್ ಸಾಗರ ಅಭಿಯಾನ ಕಡಲ ತೀರ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಕಡಪುರಂ ಭಾಗದಲ್ಲಿ ಕಡಲ ತೀರದಿಂದ ಮಾಲಿನ್ಯ ಸ್ವಚ್ಛ ಮಾಡಿದರು.
ಶಾಲಾ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ರಕ್ಷಿತಾ ಪಿ, ಮುರಳಿ ಮಾಧವ ಭಟ್ ಮತ್ತು ಕಾಸರಗೋಡು ಪಿಂಕ್ ಪೋಲೀಸ್ ಅಧಿಕಾರಿಗಳಾದ ಗೀತಾ ಪಿ.ವಿ ಹಾಗೂ ರಮ್ಯಾ ಪಿ, ನಗರಸಭಾ ಸದಸ್ಯ ಅಜಿತ್ ಕುಮಾರ್ ಉಪಸ್ಥಿತರಿದ್ದರು.