ಬದಿಯಡ್ಕ: ಮಾನ್ಯ ಸನಿಹದ ಬಾರಿಕ್ಕಾಡು ನಿವಾಸಿ, ನಿವೃತ್ತ ಬ್ಯಾಂಕ್ ಸಿಬ್ಬಂದಿ ರಾಮಚಂದ್ರ ನಾಯ್ಕ್(65)ಅವರ ಮೃತದೇಹ ಕೊಲ್ಲಂಗಾನದ ಕೆರೆಯಲ್ಲಿ ಪತ್ತೆಯಾಗಿದೆ. ಕೊಲ್ಲಂಗಾನಕ್ಕೆಂದು ಆಟೋರಿಕ್ಷಾದಲ್ಲಿ ತೆರಳಿದ್ದ ಇವರು, ಪಾಂಡವರಕೆರೆ ಸನಿಹದ ನಾಗನಕಟ್ಟೆಯಲ್ಲಿ ಪ್ರಾರ್ಥಿಸಿ ಬರುವುದಾಗಿ ಆಟೋಚಾಲಕನಲ್ಲಿ ತಿಳಿಸಿ ಹೋಗಿದ್ದು, ಬಹಳ ಹೊತ್ತಿನ ವರೆಗೂ ವಾಪಸಾಗದಿರುವುದರಿಂದ ಹುಡುಕಿ ತೆರಳಿದಾಗ ಬಟ್ಟೆ, ಚಪ್ಪಲಿ, ಮೊಬೈಲ್ ಕೆರೆಯ ದಡದಲ್ಲಿ ಪತ್ತೆಯಾಗಿತ್ತು. ಇದರಿಂದ ಸಂಶಯಗೊಂಡು ಆಟೋಚಾಲಕ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳ ಕೆರೆಯಿಂದ ಮೃತದೇಹ ಪತ್ತೆಹಚ್ಚಿದೆ. ಸ್ನಾನಕ್ಕಾಗಿ ಕೆರೆಗಿಳಿದ ಸಂದರ್ಭ ಆಯತಪ್ಪಿ ಬಿದ್ದಿರಬೇಕೆಂದು ಸಂಶಯಿಸಲಾಗಿದೆ. ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಸಿಬ್ಬಂದಿಯಾಗಿದ್ದರು.