ತಿರುವನಂತಪುರಂ: ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿ ಪಿಂಚಣಿ ಫಲಾನುಭವಿಗಳಿಗೆ ಸರ್ಕಾರ ಪಿಂಚಣಿಯ ಕಂತು ಮಂಜೂರು ಮಾಡಿದೆ.ಸುಮಾರು 62 ಲಕ್ಷ ಜನರಿಗೆ ತಲಾ 1,600 ರೂ.ಲಭಿಸಲಿದೆ.
ಬುಧವಾರದಿಂದ ಮೊತ್ತವನ್ನು ವಿತರಿಸಲಾಗುವುದು. ಈ ಮೊತ್ತ 26.62 ಲಕ್ಷ ಜನರ ಬ್ಯಾಂಕ್ ಖಾತೆಗಳಿಗೆ ತಲುಪಲಿದೆ.
ಇನ್ನುಳಿದವರಿಗೆ ಪಿಂಚಣಿಯನ್ನು ಸಹಕಾರಿ ಬ್ಯಾಂಕ್‍ಗಳ ಮೂಲಕ ಮನೆಮನೆಗೆ ತಲುಪಿಸಲಾಗುವುದು. ಕಳೆದ ಮಾರ್ಚ್ ನಿಂದ ಮಾಸಿಕ ಪಿಂಚಣಿ ವಿತರಿಸಲಾಗುತ್ತಿದೆ ಎಂದು ಸಚಿವ ಕೆ.ಎನ್ .ಬಾಲಗೋಪಾಲ್ ಮಾಹಿತಿ ನೀಡಿದರು.