ಉಪ್ಪಳ: ಕೊಲೆ, ಕಳವು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕೊಡ್ಯಮೆ ನಿವಾಸಿ ಪೈವಳಿಕೆ ಬಾಯಿಕಟ್ಟೆಯ ಮಹಮ್ಮದ್ ಎಂಬಾತನನ್ನು ಎಂಡಿಎಂಎ ಸಾಗಾಟದ ಸಂದರ್ಭ ಬಂಧಿಸಲಾಗಿದೆ.ಈತನಿಂದ 1.530ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಈತ ಸಂಚಾರಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಕೊಲೆಪ್ರಕರಣದ ಆರೋಪಿ ಮಹಮ್ಮದ್ ವಿರುದ್ಧ ಪೊಲೀಸರು ದೀರ್ಘ ಕಾಲದಿಂದ ನಿಗಾಯಿರಿಸಿದ್ದು, ಈತ ಮಾದಕದ್ರವ್ಯ ಸಾಗಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕುಂಬಳೆ ಠಾಣೆ ಎಸ್.ಐ ಎಸ್.ಐ ಶ್ರೀಜೇಶ್ ನೇತೃತ್ವದ ಪೊಲೀಸರ ತಂಡ ಕೊಡ್ಯಮೆ ಜಂಕ್ಷನ್‍ನಲ್ಲಿ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವರ್ಷಗಳ ಹಿಂದೆ ಮಲಪ್ಪುರಂ ನಿವಾಸಿಸಜಿದ್‍ರಹಮಾನ್ ಎಂಬವರನ್ನು ಮುಂಬೈಯಿಂದ ಕೊಡ್ಯಮ್ಮೆಗೆ ಕರೆಸಿ, ಇರಿದು ಕೊಲೆಗೈದ ನಂತರ ಮೃತದೇಹ ಬೆಂಕಿಹಚ್ಚಿ ಸುಟ್ಟುಹಾಕಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ.