ಕುಂಬಳೆ: ಎದೆಹಾಲು ಗಂಟಲಲ್ಲಿ ಸಿಲುಕಿ 49ದಿನ ಪ್ರಾಯದ ಹಸುಗೂಸು ಮೃತಪಟ್ಟ ಘಟನೆ ಕುಂಬಳೆಯಲ್ಲಿ ನಡೆದಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಹೇರೂರು ವೆಂಕುಮೂಲೆ ನಿವಾಸಿ, ನೌಶಾದ್-ರಾಹಿಲ ದಂಪತಿ ಪುತ್ರಿ ಸಫೀಯತ್ ನೈಫ್ ಮೃತಪಟ್ಟ ಮಗು.
ಗುರುವಾರ ಮುಂಜಾನೆ ತಾಯಿ ಮಗುವಿಗೆ ಹಾಲುಣಿಸಿ ಮಲಗಿಸಿದ್ದು, ಬೆಳಗ್ಗೆ ಎಚ್ಚರಗೊಳ್ಳದಿರುವುದನ್ನು ಮನಗಂಡು ತಕ್ಷಣ ಕುಂಬಳೆ ಜಿಲ್ಲಾಸಹಕಾರಿ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಿದಾಗ, ಮೃತಪಟ್ಟಿರುವುದು ಖಚಿತಗೊಂಡಿದೆ. ಎದೆಹಾಲು ಗಂಟಲಲ್ಲಿ ಸಿಲುಕಿದ ಪರಿಣಾಮ ಸಾವು ಸಂಭವಿಸಿರುವುದಾಗಿ ವೈದ್ಯರು ತಿಳಿಸಿದ್ದರು. ಎದೆಹಾಲು ನೀಡಿದ ತಕ್ಷಣ ಮಗುವನ್ನು ಮಲಗಿಸಿರುವುದರಿಂದ ಉಸಿರುಗಟ್ಟಿ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ.