ಕಾಸರಗೋಡು: ಮುಟ್ಟತ್ತೋಡಿ ಪಯ್ಯೋಟ ನಿವಾಸಿ, ಹಮೀದ್-ಅಫ್ಸಾ ದಂಪತಿ ಪುತ್ರ ಮಹಮ್ಮದ್ ಸಾಬಿತ್(21)ಅವರ ಮೃತದೇಹ ಕೋಯಿಕ್ಕೋಡ್ ಫರೂಕ ಎಂಬಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಫರೂಕಾದ ತಂಪುಪಾನೀಯ ಅಂಗಡಿಯಲ್ಲಿ ಕೆಲಸಕ್ಕಿದ್ದ ಮಹಮ್ಮದ್ ಸಾಬಿತ್ ಸೋಮವಾರ ಬೆಳಗ್ಗಿನಿಂದ ನಾಪತ್ತೆಯಾಗಿರುವ ಬಗ್ಗೆ ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದರು. ಕೇಸುದಾಖಲಿಸಿಕೊಂಡು ಹುಡುಕಾಟ ನಡೆಸುವ ಮಧ್ಯೆ ಫರೂಕಾದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದ ಯುವಕನೊಬ್ಬನ ಮೃತದೇಹವನ್ನು ಆಸ್ಪತ್ರೆಗೆ ಸಗಿಸಲಾಗಿದ್ದು, ಇದನ್ನು ಪರಿಶೋಧಿಸಿದಾಗ ಮೃತದೇಹ ಮಹಮ್ಮದ್ ಸಾಬಿತ್ನದ್ದೆಂದು ಗುರುತು ಪತ್ತೆಹಚ್ಚಲಾಗಿದೆ. ಮೃತದೇಹದ ಅಂಗಿ ಜೇಬಿನಿಂದ ಕಾಸರಗೋಡಿಗಿರುವ ಟಿಕೆಟ್ ಲಭಿಸಿದ್ದು, ಪ್ರಯಾಣ ಮಧ್ಯೆ ಬಿದ್ದಿರಬೇಕೆಂದು ಸಂಶಯಿಸಲಾಗಿದೆ.