HEALTH TIPS

ಎಡನೀರು ಮಠಕ್ಕೆ ದ.ಕ.ಮಾಜಿ ಸಂಸದ ನಳಿನ್ ಭೇಟಿ

ಬದಿಯಡ್ಕ: ಪ್ರಮುಖ ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಒಂದಾದ ಎಡನೀರು ಮಠದ ಪೀಠಾಧಿಪತಿಯಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ವಾಹನಕ್ಕೆ ಕಿಡಿಗೇಡಿಗಳು ಕಾಸರಗೋಡಿನಲ್ಲಿ ಹಾನಿಗೊಳಿಸಿ ನಿಂದಿಸಿದ ಘಟನೆಯನ್ನು ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಕಟುವಾಗಿ ಖಂಡಿಸಿದರು.

ಶ್ರೀಮದ್ ಎಡನೀರು ಮಠಕ್ಕೆ ಬುಧವಾರ ಭೇಟಿನೀಡಿ ಶ್ರೀಗಳಲ್ಲಿ ಮಾತುಕತೆ ನಡೆಸಿ ಆಶೀರ್ವಾದ ಪಡೆದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. 

ಕಾಸರಗೋಡು ಜಿಲ್ಲೆಯಲ್ಲಿ ಕಳವು, ದುಷ್ಕøತ್ಯ, ಮತಾಂಧ ಶಕ್ತಿಗಳ ಷಡ್ಯಂತ್ರ ಇತ್ಯಾದಿಗಳು ಹೆಚ್ಚುತ್ತಿದ್ದು, ಕೇರಳ ಪಿಣರಾಯಿ ವಿಜಯನ್ ಸರ್ಕಾರವು ಈ ನಿಟ್ಟಿನಲ್ಲಿ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ದುಷ್ಟಶಕ್ತಿಗಳು ಇನ್ನಷ್ಟು ಸಂಚು ರೂಪಿಸಿ ಸಮಾಜದಲ್ಲಿ ಶಾಂತಿನೆಮ್ಮದಿಯನ್ನು ಕದಡುವ ಸಾಧ್ಯತೆಯಿದೆ. ಹಿಂದುಗಳು ಇನ್ನಷ್ಟು ಒಗ್ಗಟ್ಟಾಗಿ ಮತಾಂಧ ಶಕ್ತಿಗಳನ್ನು ಹಾಗೂ ಹಿಂದೂವಿರೋಧಿ ಕೃತ್ಯಗಳನ್ನು ಕಟುವಾಗಿ ಖಂಡಿಸಿ ಎದುರಿಸಬೇಕು ಎಂದು ಅವರು ಕರೆನೀಡಿದರು. 

ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್, ಪ್ರಮುಖರಾದ ಎಂ.ಸುಧಾಮ ಗೋಸಾಡ, ಭಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಸುನಿಲ್ ಪಿ.ಆರ್., ರಮೇಶ ಮಾವಿನಕಟ್ಟೆ, ಹರೀಶ ಗೋಸಾಡ, ಕೃಷ್ಣಶರ್ಮ ಏತಡ್ಕ ಹಾಗೂ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಮುಖರು ಜೊತೆಗಿದ್ದರು. 


ಗಣ್ಯರ ಭೇಟಿ : 

ಶ್ರೀಗಳ ಕಾರಿಗೆ ಅಕ್ರಮಣಗೈದ ಘಟನೆಯ ಬಳಿಕ ಶ್ರೀಮಠಕ್ಕೆ ನಾಡಿನ ವಿವಿಧ ವಲಯಗಳ ಗಣ್ಯರು ಆಗಮಿಸಿ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಘಟನೆಯನ್ನು ಖಂಡಿಸಿ ಆಕ್ರಮಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries