ಕಾಸರಗೋಡು: ನಿವೃತ್ತ ಪ್ರಾಧ್ಯಾಪಕಿ, ಲೇಖಕಿ, ಸಂಶೋಧಕಿ ಡಾ.ಯು.ಮಹೇಶ್ವರಿ ಅವರೊಂದಿಗೆ ಸಾಹಿತ್ಯ ಸಲ್ಲಾಪ ಕಾರ್ಯಕ್ರಮ ಇಂದು(ನ.24)ಪರಕ್ಕಿಲ ಶ್ರೀಮಹಾದೇವ ಕ್ಷೇತ್ರದ ನಟರಾಜ ಮಂಟಪದಲ್ಲಿ ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕ ಆಶ್ರಯದಲ್ಲಿ ಮಧೂರು ಉಳಿಯದ ತರುಣ ಕಲಾವೃಂದದ ಸಹಯೋಗದಲ್ಲಿ ನಡೆಯಲಿದೆ.
ಬೆಳಿಗ್ಗೆ 10 ಕ್ಕೆ ಗಡಿನಾಡ ಚೇತನ ಪ್ರಶಸ್ತಿ ವಿಜೇತ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉದ್ಘಾಟಿಸುವರು.ಹಿರಿಯ ಸಾಹಿತಿ, ಅರ್ಥಧಾರಿ ಡಾ.ಕೆ.ರಮಾನಂದ ಬನಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಶುಭಾಶಂಸನೆಗೈಯ್ಯುವರು.ಡಾ.ಯು.ಮಹೇಶ್ವರಿ ಉಪಸ್ಥಿತರಿರುವರು.
11 ರಿಂದ ಡಾ.ಯು.ಮಹೇಶ್ವರಿ ಸಾಹಿತ್ಯ ದರ್ಶನ ನಡೆಯಲಿದ್ದು, ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಅಧ್ಯಕ್ಷತೆ ವಹಿಸುವರು.ಈ ಸಂದರ್ಭ ಕಾವ್ಯಗಳ ಬಗ್ಗೆ ಡಾ.ಸೌಮ್ಯಾ ಪ್ರಸಾದ್, ಲೇಖನ ಅಂಕಣ ಬರಹಗಳ ಬಗ್ಗೆ ಕಾರ್ತಿಕ್ ಪಡ್ರೆ, ವಿಮರ್ಶೆ ಸಂಶೋಧನೆಗಳ ಬಗ್ಗೆ ಡಾ.ಸುಭಾಷ್ ಪಟ್ಟಾಜೆ ವಿಷಯ ಮಂಡಿಸುವರು. ವಿಶಾಲಾಕ್ಷ ಪುತ್ರಕಳ ಸಮನ್ವಯಾಧಿಕಾರಿಗಳಾಗಿರುವರು.
ಅಪರಾಹ್ನ 2 ರಿಂದ ನಡೆಯುವ ಕವಿಗೋಷ್ಠಿಯಲ್ಲಿ ಹಿರಿಯ ಕವಿ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸುವರು. ಕವಿಗಳಾದ ಬಾಲ ಮಧುರಕಾನನ, ಅನ್ನಪೂಣ್ ಬೆಜಪ್ಪೆ, ನರಸಿಂಹ ಭಟ್ ಏತಡ್ಕ, ಜ್ಯೋಸ್ನ್ಯಾ ಎಂ.ಕಡಂದೇಲು, ಲಕ್ಷ್ಮೀ ವಿ.ಭಟ್.ಮಂಜೇಶ್ವರ, ವೆಂಕಟ ಭಟ್ ಎಡನೀರು, ಪದ್ಮಾವತಿ ಏದಾರು, ಹಿತೇಶ್ ಕುಮಾರ್ ನೀರ್ಚಾಲು, ಪ್ರಮೀಳಾ ಚುಳ್ಳಿಕ್ಕಾನ, ಕವಿತಾ ಕೂಡ್ಲು, ದಿವ್ಯಾ ಆಳ್ವ, ಸುಶೀಲಾ ಪದ್ಯಾಣ ಕವಿತೆಗಳನ್ನು ವಾಚಿಸುವರು.
ಅಪರಾಹ್ನ 3 ರಿಂದ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಗಮಕ ಕಲಾ ಪರಿಷತ್ತು ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್ ಅತಿಥಿಗಳಾಗಿ ಉಪಸ್ಥಿತರಿರುವರು.ಉಳಿಯ ತರುಣ ಕಲಾವೃಂದದ ಅಧ್ಯಕ್ಷ ಸುರೇಶ್ ಯು.ಆರ್.ಉಪಸ್ಥಿತರಿರುವರು. ಡಾ.ಯು.ಮಹೇಶ್ವರಿಯವರಿಗೆ ನೀಡುವ ಗೌರವಾಭಿನಂದನೆಯಲ್ಲಿ ಮಧುರಕಾನನ ಗಣಪತಿ ಭಟ್ ಅಭಿನಂದನಾ ಭಾಷಣಗೈಯ್ಯುವರು. ಡಾ.ವೇದಾವತಿ ಎಸ್. ಹಾಗೂ ಲಕ್ಷ್ಮೀ ಕೆ..ಗುರುನಮನ ಸಲ್ಲಿಸುವರು.