ಕಾಸರಗೋಡು: ಜಿಲ್ಲೆಯ ಕೊರಗ ಉನ್ನತಿ(ಕಾಲನಿಗೆ ಸಂವಾದಿ ಪದ) ಭೂಮಿಗಳನ್ನು ಶೀಘ್ರ ಅಳತೆಗೈದು ಭೂದಾಖಲೆಗಳನ್ನು ಹಸ್ತಾಂತರಿಸಲು ಜಿಲ್ಲಾಧಿಕಾರಿ ಕೆ.ಇನ್ಭಾÁಶೇಖರ್ ಅವರು ಸರ್ವೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು. ಈ ಕಾರ್ಯಗಳಿಗೆ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಹಾಗೂ ಕಂದಾಯ, ಭೂಮಾಪನ ಇಲಾಖೆಗಳು ಜಂಟಿಯಾಗಿ ಶ್ರಮಿಸಬೇಕು ಎಂದರು.
ಕೊರಗ ಉನ್ನತಿಯ ಸಮೀಕ್ಷೆ ಅಂಗವಾಗಿ ಬದಿಯಡ್ಕ ಗ್ರಾಮ ಪಂಚಾಯಿತಿಯ ಪೆರಡಾಲ ಮತ್ತು ಮಾಡತ್ತಡ್ಕ ಉನ್ನತಿಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಜಿಲ್ಲೆಯ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ 60 ಕೊರಗ ಶಿಖರಗಳಿವೆ. ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಎಂ.ಶಾಂತ, ತಹಶೀಲ್ದಾರ್ ಸಿ.ಅಜಯನ್, ಕಾಸರಗೋಡು ಎಟಿಡಿಒ ಕೆ.ವಿ.ರಾಘವನ್, ಗ್ರಾಮಾಧಿಕಾರಿಗಳು ಮೊದಲಾದವರು ಭಾಗವಹಿಸಿದ್ದರು.